ಬಂದಾರು : ಮೈರೋಳ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎದುರಿನ ಯಶಸ್ವಿ ಕಾಂಪ್ಲೆಕ್ಸ್ ನಲ್ಲಿ ಡಾ. ಮನೋಜ್ಞ ಇವರ “ಸಂಯೋಗ ಆಯುರ್ವೇದಾಲಯ” ಫೆ. 10ರಂದು ಉದ್ಘಾಟನೆಗೊಂಡಿತು.
ಉದ್ಘಾಟನೆಯನ್ನು ಶ್ರೀಮತಿ ಮತ್ತು ಶಂಕರನಾರಾಯಣ ಭಟ್, ನಲ್ಕ ಬಾಂಗೇರು ನೆರವೇರಿಸಿದರು.
ಈ ಸಂದರ್ಭದಲ್ಲಿ ಡಾ.ರಾಜಾರಾಮ್ ಮಡಿಕೇರಿ, ಡಾ. ಜ್ಯೋತಿ ಮಡಿಕೇರಿ, ಡಾ. ಯತೀಶ್ ಕುಮಾರ್ ಉಪ್ಪಿನಂಗಡಿ, ಡಾ.ವೆಂಕಟರಮಣ ಭಟ್ ಮುರ್ಗಜೆ, ಡಾ. ಕಿಶನ್, ಡಾ. ಸಂತೋಷ್ ಕಲ್ಲೇರಿ, ಡಾ. ಅಹಲ್ಯ, ಡಾ. ಕುಮಾರ ಸುಬ್ರಮಣ್ಯ ಮಂಜುಳಗಿರಿ., ಡಾ.ನವ್ಯಶ್ರೀ ಆಲಂಕಾರು, ಬಂದಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಖಂಡಿಗ, ಕಟ್ಟಡದ ಮಾಲಕ ಮೋಹನ್ ಬಂಗೇರ, ಅಶೋಕ ಮೊಗ್ರು , ಊರ ಗಣ್ಯರು ಉಪಸ್ಥಿತರಿದ್ದರು.
ಬಂದಂತಹ ಅತಿಥಿಗಳನ್ನು ಡಾ.ರಾಜಾರಾಮ್ ವಂದಿಸಿದರು.