ಮೂಡುಬಿದಿರೆ: ಎನ್ ಟಿ ಎ ನಡೆಸುವ ರಾಷ್ಟ್ರಮಟ್ಟದ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ಜೆಇಇ ಮೈನ್-1 ಇದರ ಫಲಿತಾಂಶ ಪ್ರಕಟವಾಗಿದ್ದು ಮೂಡುಬಿದಿರೆ ಕಲ್ಲಬೆಟ್ಟುವಿನ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿದ್ದಾರೆ.
ಮೊದಲ ಆವೃತ್ತಿಯ ಪರೀಕ್ಷೆಯನ್ನು ಜನವರಿ-ಫೆಬ್ರವರಿಯಲ್ಲಿ ನಡೆಸಲಾಗಿದ್ದರೆ, ಎರಡನೇ ಆವೃತ್ತಿ ಏಪ್ರಿಲ್ನಲ್ಲಿ ನಡೆಯಲಿದೆ. ಜೆಇಇ-ಮೇನ್ಸ್ ಪತ್ರಿಕೆ 1 ಮತ್ತು ಪತ್ರಿಕೆ 2 ರ ಫಲಿತಾಂಶಗಳ ಆಧಾರದ ಮೇಲೆ, ಈ ವರ್ಷದ ಜೂನ್‌ನಲ್ಲಿ ನಡೆಯಲಿರುವ ಜೆಇಇ-ಅಡ್ವಾಸ್ಡ್ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ, ಇದು 23 ಪ್ರಮುಖ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ (ಐಐಟಿ) ಪ್ರವೇಶ ಪಡೆಯಲು ದಾರಿ ಮಾಡಿಕೊಡುತ್ತದೆ. ಎಕ್ಸಲೆಂಟ್ ಮೂಡುಬಿದಿರೆ ದೇಶದ ಅತ್ಯುತ್ತಮ ಶಿಕ್ಷಕವರ್ಗವನ್ನು ಹೊಂದಿದ್ದು, ಶ್ರೇಷ್ಠ ಮಟ್ಟದ ತರಬೇತಿ ನೀಡುತ್ತಿದ್ದೆ, ಇಲ್ಲಿಯವರೆಗೆ ಹಲವಾರು ವಿದ್ಯಾರ್ಥಿಗಳು ದೇಶದ ವಿವಿಧ ಐಐಟಿಗಳಿಗೆ ಪ್ರವೇಶವನ್ನು ಪಡೆದಿರುವುದು ಇಲ್ಲಿಯ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಈ ಬಾರಿಯ ಫಲಿತಾಂಶದಲ್ಲಿ ವಿದ್ಯಾರ್ಥಿಗಳಾದ ಶಿಶಿರ್ ಎಚ್ ಶೆಟ್ಟಿ (99.97143 ಪರ್ಸೆಂಟೈಲ್), ಶ್ರೇಯಾಂಕ್ ಮನೋಹರ ಪೈ (99.8251 ಪರ್ಸೆಂಟೈಲ್), ಕಾರ್ತಿಕ್ ಎಸ್ (99.027 ಪರ್ಸೆಂಟೈಲ್) ಉತ್ತಮ ಅಂಕ ಗಳಿಸುವುದರ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಪರೀಕ್ಷೆಗೆ ಹಾಜರಾದ 89 ವಿದ್ಯಾರ್ಥಿಗಳಲ್ಲಿ 3 ವಿದ್ಯಾರ್ಥಿಗಳು 99 ಪರ್ಸೆಂಟೈಲ್‌ಗಿಂತ ಹೆಚ್ಚು, 6 ವಿದ್ಯಾರ್ಥಿಗಳು98 ಪರ್ಸೆಂಟೈಲ್‌ಗಿಂತ ಹೆಚ್ಚು ಮತ್ತು 36 ವಿದ್ಯಾರ್ಥಿಗಳು 90 ಪರ್ಸೆಂಟೈಲ್‌ಗಿಂತ ಹೆಚ್ಚಿನ ಅಂಕಗಳನ್ನು ಪಡೆದಿರುತ್ತಾರೆ. ವಿಷಯವಾರು 7 ವಿದ್ಯಾರ್ಥಿಗಳು ಭೌತಶಾಸ್ತ್ರದಲ್ಲಿ, 6 ವಿದ್ಯಾರ್ಥಿಗಳು ರಸಾಯನ ಶಾಸ್ತ್ರದಲ್ಲಿ, 4 ವಿದ್ಯಾರ್ಥಿಗಳು ಗಣಿತಶಾಸ್ತ್ರದಲ್ಲಿ 99 ಪರ್ಸೈಂಟೈಲ್‌ಗಿಂತ ಅಧಿಕ ಅಂಕವನ್ನು ಪಡೆದಿರುತ್ತಾರೆ.
ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.