ಧರ್ಮಸ್ಥಳ: ಇಲ್ಲಿಯ ಕಲ್ಲೇರಿ ಉನ್ನತಿ ವಾಣಿಜ್ಯ ಸಂಕೀರ್ಣದಲ್ಲಿ ನೂತನವಾಗಿ ಪ್ರಾರಂಭಗೊಂಡ ಸುನಿಲ್ ರೆಡಿವೇರ್ಸ್ ವಸ್ತ್ರ ಮಳಿಗೆಯು ಫೆ. 14 ರಂದು ಶುಭಾರಂಭಗೊಳ್ಳಲಿದೆ.
ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಧರ್ಮಸ್ಥಳ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರೀತಮ್ ಡಿ , ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಧರ್ಮಸ್ಥಳ ಅಶ್ವಿನಿ ಕ್ಲಿನಿಕ್ ನ ಡಾ. ಮೃಣಾಲಿನಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕರಾದ ವಿನೋದ್ ಕುಮಾರ್ ಸಿ. ಹೆಚ್., ಆದರ್ಶ್ ಕೆ.ಜೆ ತಿಳಿಸಿದ್ದಾರೆ.