ಧರ್ಮಸ್ಥಳ: ಇಲ್ಲಿಯ ಕಲ್ಲೇರಿ ಉನ್ನತಿ ವಾಣಿಜ್ಯ ಸಂಕೀರ್ಣದಲ್ಲಿ ನೂತನವಾಗಿ ಪ್ರಾರಂಭಗೊಂಡ ಸುನಿಲ್ ರೆಡಿವೇರ್ಸ್ ವಸ್ತ್ರ ಮಳಿಗೆಯು ಫೆ. 14 ರಂದು ಶುಭಾರಂಭಗೊಂಡಿತು .

ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ವ್ಯವಹಾರದಲ್ಲಿ ಗ್ರಾಹಕರನ್ನು ಸೆಳೆಯುವಂತ ಕಲೆಬೇಕು ಜೊತೆಗೆ ಅನುಭವ ತಾಳ್ಮೆ ಮುಖ್ಯ ಎಂದು ಹೇಳಿ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರೀತಮ್ ಡಿ, ಧರ್ಮಸ್ಥಳ ಗ್ರಾ. ಪಂ. ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಧರ್ಮಸ್ಥಳ ಅಶ್ವಿನಿ ಕ್ಲಿನಿಕ್ ನ ಡಾ. ಮೃಣಾಲಿನಿ, ಹಿರಿಯರಾದ ಶ್ರೀಧರಾವ್ಉ ಪಸ್ಥಿತರಿದ್ದು ಶುಭಹಾರೈಸಿದರು.

ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ್ ತೋಳ್ಪಾಡಿತ್ತಾಯ, ಸುನಿಲ್ ಬೇಕಲ್ ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ವಿನೋದ್ ಕುಮಾರ್ ಸಿ. ಹೆಚ್., ಆದರ್ಶ್ ಕೆ.ಜೆ ಬಂದಂತ ಅತಿಥಿ ಗಣ್ಯರನ್ನು ಸತ್ಕರಿಸಿದರು. ಪವಿತ್ರ ಧನ್ಯವಾದವಿತ್ತರು.