
ಬೆಳ್ತಂಗಡಿ: ಇಲ್ಲಿಯ ಕನ್ಯಾಡಿ ಸೇವಾ ಭಾರತಿ ಸಮೀಪ ಪ್ರವಾಸಿಗರ ಕಾರು ಹಾಗೂ ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ಹಲವು ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಫೆ.15ರಂದು ಸಂಜೆ ನಡೆದಿದೆ.

ಉಜಿರೆ ಕಡೆಯಿಂದ ಧಮ೯ಸ್ಥಳಕ್ಕೆ ಹೋಗುತ್ತಿದ್ದ ಪ್ರವಾಸಿಗರ ಕಾರು ಹಾಗೂ ಧಮ೯ಸ್ಥಳ ಕಲ್ಲೇರಿಯ ಪಾಕಿ೯ಂಗ್ ನಾ ಅನಿಲ್ ಪೂಜಾರಿ ಎಂಬವರ ರಿಕ್ಷಾ ನಡುವೆ ಅಪಘಾತ ಸಂಭವಿಸಿದೆ. ಎರಡು ವಾಹನಗಳ ಪ್ರಯಾಣಿಕರಿಗೆ ಗಾಯಗೊಂಡು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.