ಬೆಳ್ತಂಗಡಿ : ಬೆಳ್ತಂಗಡಿ ವೈಭವ್ ಆರ್ಕೇಡ್ ನಲ್ಲಿ ಒಂದು ವರ್ಷದಿಂದ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದ್ದ ಕೋಟಕ್ ಲೈಫ್ ಇದರ ದ್ವಿತೀಯ ವರ್ಷಕ್ಕೆ ಪಾದಾರ್ಪಣೆ ಸಂದರ್ಭದಲ್ಲಿ ಫೆ. 15ರಂದು ಲಕ್ಷ್ಮಿ ಪೂಜೆ ಜರುಗಿತು.

ಈ ಸಂದರ್ಭದಲ್ಲಿ ಚೀಫ್ ಏಜೆಂಟ್ ಪಾರ್ಟ್ನರ್ ದಿನಕರ್ ಕೆ., ಗಿರೀಶ್ ಬಿ.ಜಿ., ಸೀನಿಯರ್ ಪಾರ್ಟ್ನರ್ ಗಳಾದ ಪ್ರದೀಪ್ ಶೆಟ್ಟಿ, ಯೋಗೀಶ್ ಅಲಂಬಿಲ ಕೊಕ್ಕಡ, ಏಜೆಂಟ್ ಪಾರ್ಟ್ನರ್ ಗಳಾದ ಶ್ರೀಮತಿ ಅಂಬಿಕಾ, ರಾಘವ ಗೌಡ, ಗಂಗಾಧರ ಕಳೆಂಜ, ಮ್ಯಾನೇಜರ್ ಗಳಾದ ಪ್ರಜ್ವಲ್ ಅಡೂರು, ರವಿ ಆಚಾರ್ಯ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
