ಬೆಳ್ತಂಗಡಿ : ಇಲ್ಲಿಯ ಪಿ.ಎಂ.ಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ವಿದ್ಯಾರ್ಥಿಗಳಲ್ಲಿ ಗಣಿತದ ಜ್ಞಾನವನ್ನು ಹೆಚ್ಚಿಸುವ ಸಲುವಾಗಿ ಮೆಟ್ರಿಕ್ ಮೇಳ ಹಾಗೂ ಬೆಂಕಿ ಇಲ್ಲದ ಅಡುಗೆ ಕಾರ್ಯಕ್ರಮವನ್ನು ಫೆ.15 ರಂದು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ ಇದರ ಸಂಪನ್ಮೂಲ ವ್ಯಕ್ತಿಗಳಾದ ಮೋಹನ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗೂ ಗಿಡಕ್ಕೆ ನೀರನ್ನ ಉಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಚರಣ್ ಕುಮಾರ್, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ವಾರಿಜಾ, ಶಾಲಾ ಮುಖ್ಯ ಶಿಕ್ಷಕ ಸೂರ್ಯನಾರಾಯಣ ಪುತ್ತೂರಾಯರು, ಎಸ್.ಡಿ.ಎಮ್.ಸಿ ಸದಸ್ಯರು, ಶಾಲಾ ಶಿಕ್ಷಕರು ಮತ್ತು ಪೋಷಕರು ಉಪಸ್ಥಿತರಿದ್ದರು. ಗಣಿತ ಸಂಘದ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಶಿಕ್ಷಕಿ ವಿದ್ಯಾಶೆಣೈರವರು ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡಿದರು.

ವಿದ್ಯಾರ್ಥಿಗಳು ಮನೆಯಲ್ಲೇ ಬೆಳೆದ ನಾನಾ ಬಗೆಯ ತರಕಾರಿಗಳು, ಹಣ್ಣುಗಳು ಹಾಗೂ ವಿವಿಧ ಬಗೆಯ ಸ್ಟೇಷನರಿ ವಸ್ತುಗಳನ್ನ ಮಾರಾಟಕ್ಕೆ ಅಣಿಗೊಳಿಸಿದ್ದರು. ಇದರ ಜೊತೆಯಲ್ಲಿ ತಾವೇ ತಯಾರಿಸಿದ ಬಗೆಬಗೆಯ ತಿಂಡಿ ತಿನಿಸು, ಚುರುಮುರಿ, ಪಾನೀಯಗಳನ್ನು ಮಾರಾಟ ಮಾಡಿದರು. ಶಾಲಾ ಮಕ್ಕಳ ಜೊತೆಯಲ್ಲಿ ಪೋಷಕರು ಸಹ ಈ ವೇಳೆಯಲ್ಲಿ ಪಾಲ್ಗೊಂಡು ಮಕ್ಕಳ ವ್ಯವಹಾರ ಜ್ಞಾನ ಹೆಚ್ಚಿಸಲು ನೆರವನ್ನ ನೀಡಿದರು. ಚಿಕ್ಕ ಚಿಕ್ಕ ಮಕ್ಕಳು ವಸ್ತುಗಳನ್ನು ಖರೀದಿಸಿ ಸಂಭ್ರಮಿಸಿದರು. ಶಿಕ್ಷಕಿ ಶ್ರೀಮತಿ ಶುಭ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಅಖಿಲ್ ಕುಮಾರ್ ವಂದಿಸಿದರು.