ಲಾಯಿಲ: ಕರ್ನಾಟಕ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ತಾಲೂಕು ಮಟ್ಟದ ಮಂದಿರ ಅಧಿವೇಶನದ ಉದ್ಘಾಟನಾ ಕಾರ್ಯಕ್ರಮವು ಫೆ.15ರಂದು ಲಾಯಿಲ ಶ್ರೀ ಸುಬ್ರಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾಭವನದಲ್ಲಿ ನಡೆಯಿತು.

ಹಿಂದೂ ಜನ ಜಾಗೃತಿ ಸಮಿತಿ ರಾಜ್ಯ ಸಮನ್ವಯಕರು ಚಂದ್ರ ಮೊಗವೀರ್ ಮಾತನಾಡಿ, ನಕರಾತ್ಮಕ ವಿಚಾರಗಳನ್ನು ಸಕರಾತ್ಮವಾಗಿ ಮಾಡಬಲ್ಲ ಶಕ್ತಿ ದೇವಸ್ಥಾನಗಳಲ್ಲಿ ಇದೆ. ದೇವಸ್ಥಾನ ಗಳು ಸರ್ಕಾರೀಕರ ಆದ ಬಳಿಕ ಹುಂಡಿಯ ಹಣಗಳು ಯಾವುದಾವುದಕ್ಕೋ ದುರುಪಯೋಗ ಆಗುತ್ತಿದೆ. ಧಾರ್ಮಿಕ ವಿಚಾರಗಳು ನಾಶವಾಗುತ್ತಿದೆ. ದೇವಸ್ಥಾನಗಳ ರಕ್ಷಣೆ ಆಗಬೇಕು, ದೇವಸ್ಥಾನದ ಭೂಮಿ ಉಳಿಸಬೇಕು. ಎಲ್ಲಾ ದೇವಸ್ಥಾನದ ಸಂಪರ್ಕ ಆಗಬೇಕು ಎಂಬ ಉದ್ದೇಶದಿಂದ ಈ ಕಾರ್ಯ ನಡೆಯುತ್ತಿದೆ ಎಂದರು.
ವೇದಿಕೆಯಲ್ಲಿ ಸನಾತನ ಸಂತರಾದ ರಮಾನಂದ ಗೌಡ, ಮುಂಡಾಜೆ ಪರಶುರಾಮ ದೇವಸ್ಥಾನದ ಆಡಳಿತ ಸಮಿತಿ ಸದಸ್ಯ ನಾರಾಯಣ ಫದ್ಕೆ, ಬೆಳಾಲು ಅನಂತೋಡಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು ಶ್ರೀನಿವಾಸ್ ಗೌಡ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶರತ್ ಕೃಷ್ಣ ಪಡುವೇಟ್ನಾಯ, ಹಿಂದೂ ಜನ ಜಾಗೃತಿ ಸಮಿತಿ ಜಿಲ್ಲಾ ಸಮನ್ವಯಕರು ವಿಜಯ ಕುಮಾರ್, ಸಾಂತಪ್ಪ ಗೌಡ, ಪ್ರಶಾಂತ್ ಶಬರಾಯ, ಸುಧಾಕರ ಅಮ್ಮಾಜೆ, ಜಯ ಸಾಲಿಯಾನ್, ಬಾಲಕೃಷ್ಣ ಗೌಡ, ಆನಂದ ಗೌಡ, ಶಿವಾನಂದ್ ರಾವ್ ಉಪಸ್ಥಿತರಿದ್ದರು.
ವಕೀಲರರಾದ ತೀರ್ಥಶ್ ನಿರೂಪಿಸಿದರು. ಅಕ್ಷಯ್ ರಾವ್ ವಂದಿಸಿದರು.