ಉಜಿರೆ: ಉಜಿರೆ ವಲಯ, ಮಾಚಾರು ಕಾರ್ಯಕ್ಷೇತ್ರದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಪ್ರತಿ ತಿಂಗಳು ಮಾಸಾಸನ ನೀಡುತ್ತಿರುವ ವಾತ್ಸಲ್ಯ ಸದಸ್ಯರಾದ ಕೂಸಪ್ಪರವರ ಈ ಹಿಂದಿನ ಮನೆಯಲ್ಲಿ ವಾಸಿಸಲು ಕಷ್ಟಕರವಾದ ಸ್ಥಿತಿ ಇದ್ದ ಕಾರಣ , ಇದರ ಬಗ್ಗೆ ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಯೋಜನೆಯ ಕಾರ್ಯಕರ್ತರೊಂದಿಗೆ ಸೇರಿಕೊಂಡು ಇವರ ಮನೆ ಭೇಟಿ ನೀಡಿ ಯೋಜನೆಯ ಮೂಲಕ ಹೇಮಾವತಿ ವೀ. ಹೆಗ್ಗಡೆಯವರಿಗೆ ವರದಿಯನ್ನು ನೀಡಿ, ಇದನ್ನು ಮನಗಂಡ ಹೇಮಾವತಿ ವೀ.ಹೆಗ್ಗಡೆಯವರು ವಾತ್ಸಲ್ಯ ಮನೆ ನಿರ್ಮಾಣವನ್ನು ಮಾಡುವಂತೆ ವಿಶೇಷವಾಗಿ ಮಂಜುರಾತಿಯನ್ನು ನೀಡಿದರು.

ಒಕ್ಕೂಟ ವಲಯಧ್ಯಕ್ಷ ಉಮಾರಬ್ಬ, ಬದನಾಜೆ ಒಕ್ಕೂಟದ ಅಧ್ಯಕ್ಷ ಸುರೇಂದ್ರ, ಮಾಚಾರು ಒಕ್ಕೂಟದ ಉಪಾಧ್ಯಕ್ಷ ರಮೇಶ್ ನಾಯ್ಕ, ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು, ತಾಲೂಕಿನ ಜ್ಞಾನ ವಿಕಾಸ ಸಮನ್ವಯಧಿಕಾರಿ ಶ್ರೀಮತಿ ಮಧುರ ವಸಂತ್, ವಲಯ ಮೇಲ್ವಿಚಾರಕಿ ಶ್ರೀಮತಿ ವನಿತಾ, ಸೇವಾಪ್ರತಿನಿಧಿ ಹೇಮಲತಾ, ಮೇಸ್ತ್ರಿ ಸುರೇಶ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.