ಉಜಿರೆ: ಇಲ್ಲಿನ ಶ್ರೀ ಜನಾರ್ದನ ದೇವಸ್ಥಾನದ ರಾಜಗೋಪುರದ ವಿಜಯಗೋಪುರದ ಶಿಲಾನ್ಯಾಸ ಕಾರ್ಯಕ್ರಮ ಫೆ. 17ರಂದು ನಡೆಯಿತು.

ಕಾಸರಗೋಡು ಶ್ರೀ ಎಡನೀರು ಮಠದ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತಿ ಶ್ರೀ ಪಾದಂಗಳರು ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಭಾಗವಹಿಸಿದರು.

ಶ್ರೀ ಜನಾರ್ದನ ದೇವಸ್ಥಾನ ರಾಜಗೋಪುರ ನಿರ್ಮಾಣ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಶಾಸಕ ಹರೀಶ್ ಪೂಂಜ, ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್, ಶ್ರೀ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ಉಪಸ್ಥಿತರಿದ್ದರು.

ಈ ವೇಳೆ ಬ್ರಹ್ಮ ರಥ ನಿರ್ಮಾಣ ಘೋಷಣೆಯನ್ನು ಶರತ್ ಕೃಷ್ಣ ಪಡ್ವೆಟ್ನಾಯ ಮಾಡಿದರು.
ರಾಜಗೋಪುರ ನಿರ್ಮಾಣದ ಮನವಿ ಪತ್ರ , ರಶೀದಿ ಪುಸ್ತಕ ಹಾಗೂ ಕೂಪನ್ ಬಿಡುಗಡೆಗೊಳಿಸಲಾಯಿತು.

ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶ್ರೀಧರ ಪಡ್ವೆಟ್ನಾಯ, ಶಿವರಾಮ ಪಡ್ವೆಟ್ನಾಯ, ಅನಂತ ಮೋಹನ್ ರಾವ್,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯಸ್ಥರಾದ ಅನಿಲ್ ಕುಮಾರ್ ಎಸ್.ಎಸ್,
ರಾಜಗೋಪುರ ಸಮಿತಿ ಸಂಚಾಲಕ ಮೋಹನ್ ಕುಮಾರ್, ಕೋಶಾಧಿಕಾರಿ ರಾಜೇಶ್ ಪೈ,ಕಾರ್ಯದರ್ಶಿ ಲಕ್ಷ್ಮಣ ಸಫಲ್ಯ, ಪ್ರಮುಖರಾದ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ, ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಎಂ.ಡಿ ಜನಾರ್ಧನ್, ಗೋವಿಂದ ದಾಮ್ಲೆ,ಮಾಧವ ಹೊಳ್ಳ ಕಾಮಧೇನು, ರಾಜೇಶ್ ಶೆಟ್ಟಿ ನವಶಕ್ತಿ,ಅರುಣ್ ಕುಮಾರ್ ದಿಶಾ,ವಿದ್ಯಾ ಶ್ರೀನಿವಾಸ್ ಬೆಳಾಲು,ಡಾ.ಎಂ.ಎಂ ದಯಾಕರ್ ಉಜಿರೆ, ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಕುಮಾರ ಹೆಗ್ಡೆ, ಸೋಮಶೇಖರ್ ಶೆಟ್ಡಿ, ರಬ್ಬರ್ ಸೊಸೈಟಿ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ ಬೆಂಗತ್ಯಾರು, ಉದ್ಯಮಿ ಗಳಾದ ಪ್ರಭಾಕರ ಹೆಗ್ಡೆ ಮಹಾವೀರ, ಪ್ರಶಾಂತ್ ಜೈನ್ ಅಮೃತ ಟೆಕ್ಟ್ ಟೈಲ್ಸ್,ಶ್ರೀಧರ್ ಸುರಕ್ಷಾ ಮೆಡಿಕಲ್,ತುಕರಾಮ್ ಸಾಲಿಯಾನ್ ಕನ್ಯಾಡಿ,ರಾಜೇಶ್ ತ್ರಿಶೂಲ್, ಅರವಿಂದ ಕಾರಂತ್, ಉಮೇಶ್ ಶೆಟ್ಟಿ ದುರ್ಗಾ ,ಅಕ್ಷಯ್ ದಿಶಾ, ಉದ್ಯಮಿ ರವಿ ಚಕ್ಕಿತ್ತಾಯ, ಬೆಳ್ತಂಗಡಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ, ಮಹಿಳಾ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘದ ಮಾಜಿ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ,ಬಾಲಕೃಷ್ಣ ಶೆಟ್ಟಿ ಉಜಿರೆ, ಪ್ರಭಾಕರ ಶೆಟ್ಟಿ ಉಪ್ಪಡ್ಕ,ಅಜಯ್ ಶೆಟ್ಟಿ ಉಜಿರೆ, ರಘುರಾಮ ಶೆಟ್ಟಿ ಉಜಿರೆ ಹಾಗೂ ಊರವರು ಉಪಸ್ಥಿತರಿದ್ದರು.
ಶಿವಪ್ರಸಾದ್ ಬಾರಯಾರಿತ್ತಾಯ ಮತ್ತು ವೃಂದ ವೇದಘೋಷ ಮಾಡಿದರು. ಜನಾರ್ದನ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರು ಶರತ್ ಕೃಷ್ಣ ಪಡ್ವೆಟ್ನಾಯ ಸ್ವಾಗತಿಸಿ , ಸುನೀಲ್ ಸಂಘಪಂಡಿತ್ ಮತ್ತು ರವೀಂದ್ರ ಶೆಟ್ಟಿ ಬಳಂಜ ಕಾರ್ಯಕ್ರಮ ನಿರೂಪಿಸಿದರು. ಸಂಜೀವ ಶೆಟ್ಟಿ ಕುಂಟಿನಿ ಧನ್ಯವಾದವಿತ್ತರು.