36.4 C
ಪುತ್ತೂರು, ಬೆಳ್ತಂಗಡಿ
February 23, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪುದುವೆಟ್ಟು ಗ್ರಾಮ ಸಭೆ: ಕಂದಾಯ ಇಲಾಖೆಯ ಅಧಿಕಾರಿಗಳ ಗೈರು, ಗ್ರಾಮಸ್ಥರು ಅಕ್ರೋಶ

ಪುದುವೆಟ್ಟು: ಪುದುವೆಟ್ಟು ಗ್ರಾಮ ಪಂಚಾಯತ್‌ನ 2024-25ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಫೆ.17ರಂದು ಗ್ರಾ.ಪಂ. ಪ್ರಭಾರ ಅಧ್ಯಕ್ಷ ಪೂರ್ಣಾಕ್ಷ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರಗಿತು. ಸಮಾಜ ಕಲ್ಯಾಣ ಇಲಾಖೆಯ ನಿಲಯ ಮೇಲ್ವಿಚಾರಕ ಧೀರಜ್ ಕುಮಾರ್ ಮಾರ್ಗದರ್ಶಿ ಅಧಿಕಾರಿಯಾಗಿ ಸಭೆ ಮುನ್ನಡೆಸಿದರು.

ಇಲಾಖಾಧಿಕಾರಿಗಳು ಗೈರು ಗ್ರಾಮಸ್ಥರು ಹೈರಾಣ:
ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಬಾಕಿ ಉಳಿದ ಇಲಾಖೆಯ ಅಧಿಕಾರಿಗಳು ಗ್ರಾಮ ಸಭೆಗೆ ಬರಬೇಕು ಅಲ್ಲಿಯವರೆಗೆ ಸಭೆ ನಡೆಯಲು ಬಿಡುವುದಿಲ್ಲ ಎಂದು ಸಭೆಯ ಪ್ರಾರಂಭದಲ್ಲಿ ಗ್ರಾಮಸ್ಥರು ಪಟ್ಟು ಹಿಡಿದರು. ಅಧಿಕಾರಿಗಳು ಕೂಡ ಕಾನೂನು ನನ್ನು ಪಾಲಿಸಬೇಕು. ಪುದುವೆಟ್ಟು ಗ್ರಾಮವನ್ನು ಅಧಿಕಾರಿಗಳು ಪದೇ ಪದೇ ನಿರ್ಲಕ್ಷ್ಯ ಧೋರಣೆ ಮಾಡುತ್ತಿದ್ದಾರೆ. ಪ್ರತಿ ಬಾರಿ ಕೊರಂ ಕೊರತೆ ಇರುತಿತ್ತು ಆದರೆ ಇಂದು ಅಧಿಕಾರಿಗಳು ಕೂಡ ಗೈರು ಆಗಿದ್ದಾರೆ ಅಷ್ಟೇ ಅಲ್ಲದೆ ಗ್ರಾಮಸ್ಥರು ಕೂಡ ಕ್ಷೀಣ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಗ್ರಾಮಸ್ಥರ್ರ್ರೋವರು ತಿಳಿಸಿದರು.

ಸಮಸ್ಯೆಯನ್ನು ಯಾರ ಬಳಿ ಕೇಳುವುದು:
ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ ಇರುವ ಕಾರಣ ಸಭೆಗೆ ಗೈರು ಹಾಜರಾಗಿದ್ದಾರೆ ಎಂದು ಪಿಡಿಓ ರವಿ ಬಸಪ್ಪ ಹೇಳಿದರು. ಅವರು ಸಭೆಗೆ ಹಾಜರಾಗಲು ಅನಾನುಕೂಲವಾಗುತ್ತದೆ ಎಂದು ತಹಶೀಲ್ದಾರ್ ಗ್ರಾ.ಪಂ.ಅಧ್ಯಕ್ಷರಿಗೆ ತಿಳಿಸಿದ್ದಾರೆ ಎಂದು ಪಿಡಿಓ ತಿಳಿಸಿದರು. ಸರ್ವೇ ನಂಬ್ರ 267ರ ಮಾಹಿತಿ ಬೇಕು ಈ ಬಗ್ಗೆ ಯಾರು ತಿಳಿಸುತ್ತಾರೆ ಎಂದು ಗ್ರಾಮಸ್ಥ ಕೇಳಿದರು. ಈ ಬಗ್ಗೆ ನೀವು ಲಿಖಿತ ರೂಪದಲ್ಲಿ ನೀಡಿ ಅಥವಾ ನಿಮ್ಮ ಪ್ರಶ್ನೆಯನ್ನು ತಿಳಿಸಿ ಪಿಡಿಓ ಸಂಬಂಧಪಟ್ಟವರಿಗೆ ತಿಳಿಸುತ್ತಾರೆ ಎಂದು ಮಾರ್ಗದರ್ಶಿ ಅಧಿಕಾರಿ ಧೀರಜ್ ಹೇಳಿದರು.

ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮ ಸಭೆಗೆ ಹಾಜರಾಗುತ್ತಾರೆ ಎಂದು ಮಾಹಿತಿ ನೀಡಿದರು. ಪೊಲೀಸ್ , ಪಶು ಸಂಗೋಪನಾ, ಮೆಸ್ಕಾಂ, ಆರೋಗ್ಯ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಸದಸ್ಯರಾದ ಭಾಸ್ಕರ, ಯಶವಂತ ಗೌಡ ಡೆಚ್ಚಾರು , ಅಪ್ಪಿ, ರೇಣುಕಾ, ವನಿತಾ ಹಾಗೂ ಇಂದಿರಾ, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪಿಡಿಓ ರವಿ ಬಸಪ್ಪ ಸ್ವಾಗತಿಸಿದರು.

Related posts

ಉದ್ಯಮಿ ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಗುರುವಾಯನಕೆರೆ ಅರೆಮಲೆಬೆಟ್ಟಕ್ಕೆ ಭೇಟಿ

Suddi Udaya

ಕಡಿರುದ್ಯಾವರ ಬಿಜು ತೋಮಸ್ ರವರ ಬಾಳೆ ಕೃಷಿ ಗಾಳಿ ಮಳೆಗೆ ಸರ್ವನಾಶ

Suddi Udaya

ಪಡಂಗಡಿ: ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯಿಂದ ಆರೋಗ್ಯ ಮಾಹಿತಿ ಹಾಗೂ ತಪಾಸಣೆ

Suddi Udaya

ಬೆಳ್ತಂಗಡಿ ಭಾರತೀಯ ಮಜ್ದೂರ್ ಸಂಘದ ಕಚೇರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಭೇಟಿ

Suddi Udaya

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನವೀಕೃತಗೊಂಡ ಪೆರೋಡಿತ್ತಾಯಕಟ್ಟೆ ಶಾಖೆಯ ಉದ್ಘಾಟನೆ

Suddi Udaya

ಮಚ್ಚಿನ ಗ್ರಾ.ಪಂ. ನಿಂದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಲೋಕಾರ್ಪಣೆಯನ್ನು ಎಲ್ ಇ ಡಿ ಪರದೆ ಮೂಲಕ ವೀಕ್ಷಣೆ

Suddi Udaya
error: Content is protected !!