26.1 C
ಪುತ್ತೂರು, ಬೆಳ್ತಂಗಡಿ
February 23, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಇಳಂತಿಲ ಗ್ರಾಮದ ಪೆದಮಲೆ ಕುಟ್ಟಿಕಳ ಅಜಿಲಮೊಗರು ನಾವೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ಒದಗಿಸುವಂತೆ ಸಚಿವ ಸತೀಶ್ ಜಾರಕಿಹೊಳಿ ರವರಿಗೆ ಮನವಿ

ಬೆಳ್ತಂಗಡಿ: ಇಳಂತಿಲ ಗ್ರಾಮದ ಪೆದಮಲೆ ಕುಟ್ಟಿಕಳ ಅಜಿಲಮೊಗರು ನಾವೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ಒದಗಿಸುವಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ರವರಿಗೆ ಕೆ.ಪಿ.ಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮನವಿ ನೀಡಿದರು.

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಇಳಂತಿಲ ಗ್ರಾಮದ ಪೆದಮಲೆ ಕುಟ್ಟಿಕಳ ಅಜಿಲಮೊಗರು ನಾವೂರು 12 ಕಿಲೋಮೀಟರ್ ರಸ್ತೆಯು ತೀರ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ.ಮತ್ತು ಈ ರಸ್ತೆಯು ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕುಗಳನ್ನು ಸಂಪರ್ಕಿಸುವ ರಸ್ತೆಯಾಗಿದೆ ಎಂದು ಮನವಿಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ತೆಕ್ಕರು ಸಹಕಾರಿ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್, ಕೆ. ಕೆ ಸಾಹುಲ್ ಅಮೀದ್, ಜಯ ವಿಕ್ರಂ, ಇಸುಬು ಇಲಂತಿಲ, ಬಾಲಕೃಷ್ಣ ಶೆಟ್ಟಿ, ಅಯೂಬ್ ಉಪಸ್ಥಿತರಿದ್ದರು.

Related posts

ದಂತ ವೈದ್ಯಕೀಯ ಪರೀಕ್ಷೆ : ಗೇರುಕಟ್ಟೆಯ ಡಾ|ಅನುದೀಕ್ಷಾರಿಂದ ಅತ್ಯುತ್ತಮ ಸಾಧನೆ

Suddi Udaya

ವಿಷವಿಕ್ಕಿದ ದುರುಳರು; 10ಕ್ಕಿಂತ ಅಧಿಕ ನಾಯಿಗಳ ಸಾವು

Suddi Udaya

ಗೇರುಕಟ್ಟೆ: ಸ್ಥಳೀಯ ಯುವಕರ ತಂಡದಿಂದ ರಸ್ತೆ ದುರಸ್ಥಿ

Suddi Udaya

ಧರ್ಮಸ್ಥಳ: ಬೊಳಿಯಾರುನಲ್ಲಿ ಕಾಡಾನೆಗಳು ಎಳೆದ ಮರ, ವಿದ್ಯುತ್ ಲೈನಿನ ಮೇಲೆ ಬಿದ್ದು ಕಂಬಗಳಿಗೆ ಹಾನಿ

Suddi Udaya

ಅರೆಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಕುಂಭಾಭಿಷೇಕ ಪೂರ್ವಭಾವಿಯಾಗಿ ಚಪ್ಪರ ಮೂಹೂರ್ತ

Suddi Udaya

ನಾರಾವಿ ಗ್ರಾ.ಪಂ. ನಲ್ಲಿ ಸಂವಿಧಾನ ಜಾಗೃತಿ ಜಾಥಾ

Suddi Udaya
error: Content is protected !!