ಕಕ್ಕಿಂಜೆ: ಕಕ್ಕಿಂಜೆ ಹಿ.ಪ್ರಾ. ಶಾಲೆಯಲ್ಲಿ ಮಕ್ಕಳ ಮೇಲೆ ಹೆಜ್ಜೇನು ದಾಳಿ ನಡೆಸಿದ ಘಟನೆ ಫೆ.18 ರಂದು ಬೆಳಗ್ಗೆ ಸಂಭವಿಸಿದ್ದು ಸುಮಾರು 15 ವಿದ್ಯಾರ್ಥಿಗಳಿಗೆ ಹೆಜ್ಜೇನು ದಾಳಿ ಮಾಡಿದ್ದು , ಅಸ್ವಸ್ಥರಾಗಿದ್ದ ಮಕ್ಕಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಕ್ಕಳು ಶಾಲೆಯಲ್ಲಿ ಇದ್ದ ವೇಳೆ ಏಕಾಏಕಿ ಹೆಜ್ಜೇನು ದಾಳಿ ನಡೆಸಿದೆ. ಮಕ್ಕಳು ಚೆಲ್ಲಾಪಿಲ್ಲಿಯಾಗಿ ಓಡಿದ್ದು, ಹಲವರಿಗೆ ಹೆಜ್ಜೇನು ಕಚ್ಚಿದೆ. ಮಕ್ಕಳ ಅಳು ಕೇಳಿ ಸ್ಥಳೀಯರು ಶಾಲೆಗೆ ಧಾವಿಸಿದ್ದು ಮಕ್ಕಳನ್ನು ರಕ್ಷಿಸುವ ಪ್ರಯತ್ನ ನಡೆಸಿದ್ದಾರೆ.
ಶಾಲೆಯ ಸುತ್ತ ಹೆಜ್ಜೇನುಗಳು ಸುತ್ತಾಡುತ್ತಿದ್ದು, ಸ್ಥಳೀಯರು ಬೆಂಕಿ ಹೊಗೆ ಹಾಕಿ ಹೆಜ್ಜೇನು ಗಳನ್ನು ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ಮಾಡಿದ್ದು, ಶಾಲೆಗಳಿಗೆ ರಜೆ ಘೋಷಿಸಲಾಗಿದೆ.