24.3 C
ಪುತ್ತೂರು, ಬೆಳ್ತಂಗಡಿ
February 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನೇತೃತ್ವದಲ್ಲಿ ಗೀತೆ ಜತೆ ಸಾಹಿತ್ಯ ಸಾಂಗತ್ಯ ಉಪನ್ಯಾಸ ಮಾಲಿಕೆಯ ಎರಡನೆಯ ಅಧ್ಯಾಯ

ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದಲ್ಲಿ ಗೀತೆ ಜತೆ ಸಾಹಿತ್ಯ ಸಾಂಗತ್ಯ ಉಪನ್ಯಾಸ ಮಾಲಿಕೆಯ ಎರಡನೇಯ ಅಧ್ಯಾಯವು ಫೆ.16 ರಂದು ನಡೆಯಿತು.

ಗೌರವ ಉಪಸ್ಥಿತರಿದ್ದ ಅಭಾಸಾಪ ವಿಭಾಗ ಸಂಯೋಜಕರಾದ ಸುಂದರ ಶೆಟ್ಟಿ ಇಳಂತಿಲ ಇವರನ್ನು ಶ್ರೀಮತಿ ವಸಂತಿ ಕುಳಮರ್ವ ಇವರು ಮತ್ತು ಸಂಪನ್ಮೂಲ ವ್ಯಕ್ತಿ ಪ್ರೊ.ಗಣಪತಿ ಭಟ್ ಕುಳಮರ್ವ ಇವರನ್ನು ಶ್ರೀಮತಿ ಸುಭಾಷಿಣಿ ಇವರು ತಾಂಬೂಲ ನೀಡಿ ಗೌರವಿಸಿದರು.


ಪ್ರೊ. ಗಣಪತಿ ಭಟ್ ಕುಳಮರ್ವ ಇವರು ಭಗವದ್ಗೀತೆಯ ಎರಡನೇ ಅಧ್ಯಾಯದ ಉಪನ್ಯಾಸ ಮಾಲಿಕೆಯ ಮಹಾಭಾರತದ ಯುದ್ಧ ಸನ್ನಿವೇಶದಲ್ಲಿ ಧರ್ಮ ಅಧರ್ಮಗಳ ಸಂಘರ್ಷದ ದ್ವಂದ್ವದಲ್ಲಿ ಇದ್ದ ಅರ್ಜುನನಿಗೆ ,ಹೃದಯ ದೌರ್ಬಲ್ಯವನ್ನು ತೊರೆದು ಕ್ಷತ್ರಿಯ ಧರ್ಮವನ್ನು ನೆನಪಿಸುತ್ತಾ.., ಕರ್ತವ್ಯದಲ್ಲಿ ನಿರತನಾದವನು ಭಾವನೆಗಳ ದಾಸನಾಗಬಾರದು, ಬರಿಯ ದೇಹದ ಮೇಲೆ ಆಕ್ರಮಣ ಮಾಡಿ ಅವರ ತಪ್ಪಿಗೆ ಶಿಕ್ಷೆ ನೀಡಿ ಅವರನ್ನು ಮೋಕ್ಷಕ್ಕೆ ಕಳುಹಿಸುವ ಮಹತ್ಕಾರ್ಯ ಎಂದು ಭಾವಿಸಿಕೋ… ಹಳೆಯ/ಹರಿದ ಅಂಗಿಯನ್ನು ಬದಲಾಯಿಸಿದಷ್ಟೇ ಈ ಸಾವು ಎಂದು ಸರಳೀಕರಿಸಿ, ಸ್ಥಿತ ಪ್ರಜ್ಞನ ಲಕ್ಷಣಗಳನ್ನು ವಿವರಿಸಿ,,ಧರ್ಮ ರಕ್ಷಣೆಯ ಅವಕಾಶವನ್ನು ಕೈ ಚೆಲ್ಲಬೇಡ, ಯುದ್ಧವನ್ನು ಪ್ರಾರಂಭಿಸು ಎಂದು ಗೀತೆಯ ಸ್ವಾರಸ್ಯವನ್ನು, ವಿವಿಧ ಉದಾಹರಣೆಗಳ ಮೂಲಕ ಮನೋಜ್ನವಾಗಿ ವಿವರಿಸಿದರು


ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿದ್ದ ಅಭಾಸಾಪ ವಿಭಾಗ ಸಂಯೋಜಕ ಸುಂದರ ಶೆಟ್ಟಿ ಇಳಂತಿಲ ಇವರು
ಭಗವದ್ಗೀತೆಯ ಗೀತೋಪದೇಶ ಪ್ರತಿ ಜನಸಾಮಾನ್ಯರ ನಾಡಿ ಮಿಡಿತವಾಗಬೇಕು ಎಂಬ ಸದುದ್ದೇಶ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ಇವರ ಆಶಯ ಎಂದು ನುಡಿದರು
ಶ್ರೀಮತಿ ಪ್ರೇಮಲತ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ಗಣಪತಿ ಭಟ್ ಕುಳಮರ್ವ ಇವರಿಗೆ ಶ್ರೀ ರಾಮಚಂದ್ರ ಶೆಟ್ಟಿ ಇವರು ಪುಸ್ತಕ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳು, ಪ್ರಕಾರ ಪ್ರಮುಖರುಮತ್ತು ಸದಸ್ಯರು, ನಮ್ಮ ಮನೆ ಹವ್ಯಕ ಭವನ ಕ್ರಿಯಾ ಸಮಿತಿಯ ಸದಸ್ಯರು, ಲಯನ್ಸ್ ಕ್ಲಬ್ ಬೆಳ್ತಂಗಡಿಯ ಸದಸ್ಯರು, ಸ್ಥಳೀಯ ಭಜನಾ ಮಂಡಲದ ಪದಾಧಿಕಾರಿಗಳು ಸದಸ್ಯರು, ವೇದವ್ಯಾಸ ಶಿಶುಮಂದಿರದ ಪದಾಧಿಕಾರಿಗಳು, ಹಾಗೂ ಊರಿನ ಮಹನೀಯರು ಮತ್ತು ಮಹಿಳೆಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದು ದ್ವಿತೀಯ ಅಧ್ಯಾಯದ ಪ್ರಯೋಜನವನ್ನು ಪಡೆದುಕೊಂಡರು.

ಸಮಿತಿಯ ಸದಸ್ಯೆರಾದ ಶ್ರೀಮತಿ ಆಶಾ ಅಡೂರು ಮತ್ತು ಅಕ್ಷತಾ ಅಡೂರು ಶಾರದೆಯನ್ನು ಸ್ತುತಿಸಿದರು. ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿಯವರ ರಚನೆಯ ಆಶಯಗೀತೆಯನ್ನು ಶ್ರೀಮತಿ ಅಶ್ವಿಜ ಶ್ರೀಧರ್ ಇವರು ರಾಗ ಸಂಯೋಜಿಸಿ ಸುಶ್ರಾವ್ಯವಾಗಿ ಹಾಡಿದರು. ವಿದ್ಯಾರ್ಥಿ ಪ್ರಕಾರದ ಪ್ರಮುಖ್ ಮಹಾಬಲ ಗೌಡ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಶ್ರೀಮತಿ ವಿನುತಾ ರಜತ್ ಗೌಡ ಇವರು ಕಾರ್ಯಕ್ರಮವನ್ನು ನಿರೂಪಿಸಿ, ಉಪಾಧ್ಯಕ್ಷರಾದ ಶ್ರೀ ರಾಮಕೃಷ್ಣ ಭಟ್ ಬದನಾಜೆ ಸರ್ವರಿಗೂ ಧನ್ಯವಾದವನ್ನಿತ್ತರು.

Related posts

ಚಿತ್ರಕಲಾ ಗ್ರೇಡ್ ಪರೀಕ್ಷೆ: ಧರ್ಮಸ್ಥಳ ಶ್ರೀ ಮಂ.ಅ. ಪ್ರೌಢಶಾಲೆಗೆ ಶೇಕಡಾ 100 ಫಲಿತಾಂಶ

Suddi Udaya

ಬೆಳ್ತಂಗಡಿ ವರ್ತಕರ ಸಂಘದ ವತಿಯಿಂದ ಹೂವಿನ ವ್ಯಾಪಾರಿ ಶಿವರಾಮ್ ರವರಿಗೆ ಆರ್ಥಿಕ ಸಹಾಯ

Suddi Udaya

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯಿಂದ ವೈದ್ಯಕೀಯ ಚಿಕಿತ್ಸಾ ನೆರವು

Suddi Udaya

ಅಳದಂಗಡಿ: ಹೊಟೇಲ್ ಉದ್ಯಮ ನಿರ್ವಹಿಸುತ್ತಿದ್ದ ಯೋಗೀಶ್ ಪೂಜಾರಿ ಹೆನ್ಕಲ ಅನಾರೋಗ್ಯದಿಂದ ನಿಧನ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಿಕ್ಷಕರಿಗೆ ‘ಫೋನೆಟಿಕ್ಸ್ ಇನ್ ಆಕ್ಷನ್: ಎಂಗೇಜಿಂಗ್ ಯಂಗ್ ಮೈಂಡ್ಸ್’ ಕಾರ್ಯಾಗಾರ

Suddi Udaya

ವೇಣೂರು: ಅಕ್ರಮವಾಗಿ ಗಾಂಜಾ ಸಾಗಾಟ,ಆರೋಪಿ ಬಂಧನಮೋಟಾರ್ ಸೈಕಲ್ ಹಾಗೂ ರೂ. 37 ಸಾವಿರದ 500 ಗ್ರಾಂ ಗಾಂಜಾ ವಶ ಪೋಲಿಸ್ ವೃತ್ತ ನಿರೀಕ್ಷಕ ಶಿವಕುಮಾರ ಬಿ ರವರ ನೇತೃತ್ವದಲ್ಲಿ ಕಾರ್ಯಾಚರಣೆ

Suddi Udaya
error: Content is protected !!