ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷಗಳ ಅವಧಿಗೆ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ಅಬ್ದುಲ್ ರಹಿಮಾನ್, ಶೇಖರ ಪೂಜಾರಿ, ಬಿ. ಅಬ್ದುಲ್ ಮುನೀರ್, ಎಸ್.ಬಿ ಇಬ್ರಾಹಿಂ, ಸತೀಶ್ ಪೂಜಾರಿ, ಕೃಷ್ಣಪ್ಪ ಮೂಲ್ಯ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ರವಿ, ಪ.ಪಂ ಕ್ಷೇತ್ರದಿಂದ ವಸಂತಿ,ಹಿಂದುಳಿದ ಎ ಕ್ಷೇತ್ರದಿಂದ ಬಿ. ಅಬ್ದುಲ್ ರಝಾಕ್, ಹಿಂದುಳಿದ ಬಿ ಕ್ಷೇತ್ರದಿಂದ ಇನಾಸ್ ರೋಡ್ರಿಗಸ್, ಮಹಿಳಾ ಮೀಸಲು ಕ್ಷೇತ್ರದಿಂದ ರಾಜೇಶ್ವರಿ ರಮೇಶ್, ಜೀನತ್ ಆಯ್ಕೆಯಾಗಿದ್ದಾರೆ.
ಚುನಾವಣಾ ಪ್ರಕ್ರಿಯೆಯನ್ನು ರಿಟರ್ನಿಂಗ್ ಅಧಿಕಾರಿ ಪ್ರತಿಮಾ ಬಿ ನೆರವೇರಿಸಿದರು.