37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ರೂ. 6 ಕೋಟಿ ವೆಚ್ಚದಲ್ಲಿ ಗುರುವಾಯನಕೆರೆ- ಉಪ್ಪಿನಂಗಡಿ ರಸ್ತೆ ಮರು ಡಾಮರೀಕರಣ ಕಾಮಗಾರಿ: ಶಾಸಕ ಹರೀಶ್‌ ಪೂಂಜ ಉಪಸ್ಥಿತಿಯಲ್ಲಿ ಸಂಸದ ಕ್ಯಾ| ಬ್ರಿಜೇಶ್ ಚೌಟರಿಂದ ಶಿಲಾನ್ಯಾಸ

ಬೆಳ್ತಂಗಡಿ : ಗುರುವಾಯನಕೆರೆಯಿಂದ ಉಪ್ಪಿನಂಗಡಿ ತನಕದ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯು ರೂ.6 ಕೋಟಿ ವೆಚ್ಚದಲ್ಲಿ ಮರುಡಾಮರೀಕಣವಾಗಲಿದ್ದು, ಕಾಮಗಾರಿಗೆ ಫೆ.18ರಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಶಿಲಾನ್ಯಾಸ ನೆರವೇರಿಸಿದರು.

ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಶಶಿಧರ ಶೆಟ್ಟಿ ಬರೋಡ ನವಶಕ್ತಿ ಉಪಸ್ಥಿತರಿದ್ದರು.


ಗುರುವಾಯನಕೆರೆ – ಉಪ್ಪಿನಂಗಡಿ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರ ಮನವಿ ಮೇರೆಗೆ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಕೇಂದ್ರ ಸರ್ಕಾರದ ಜೊತೆ ಮಾತನಾಡಿ, ಕೇಂದ್ರ ರಸ್ತೆ ಮೂಲ ಸೌಕರ್ಯ ನಿಧಿಯಿಂದ ರಸ್ತೆ ಅಭಿವೃದ್ಧಿಗೆ ರೂ.6 ಕೋಟಿ ಅನುದಾನವನ್ನು ಮಂಜೂರುಗೊಳಿಸುವಲ್ಲಿ ಯಶಸ್ವಿಯಾಗಿದ್ದರು.


ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ,ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ ಪ್ರಜ್ವಲ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಬಿಜೆಪಿ,ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ, ಪ್ರಮುಖರಾದ ಈಶ್ವರ ಭೈರ, ವಸಂತಿ ಮಚ್ಚಿನ,ವಡಿವೇಲು, ಮಹಾಬಲ ಗೌಡ,ಉಮೇಶ್ ಕುಲಾಲ್, ರಕ್ಷೀತ್ ಪಣೆಕ್ಕರ್, ಮಂಜುನಾಥ ಕುಂಬ್ಳೆ,, ಕಾಂತಪ್ಪ ಗೌಡ, ಆಶಾಲತಾ, ಸುಬ್ರಹ್ಮಣ್ಯ ಕುಮಾರ್ ಅಗತ೯, ರಾಜ್ ಪ್ರಕಾಶ್ ಶೆಟ್ಟಿ, ರಾಜೇಶ್ ಕುಲಾಲ್ ಮಾಲಾಡಿ, ಸಂತೋಷ್ ಗುರುವಾಯನಕೆರೆ, ಉದಯ ಬಂದಾರು, ನವೀನ್ ನೆರಿಯ, ಪ್ರಭಾಕರ ಆಚಾರ್ಯ, ಗಣೇಶ್ ಗೌಡ ನಾವೂರು, ಶರತ್ ಕುಮಾರ್ ಶೆಟ್ಟಿ, ದಿವಾಕರ್ ಗೇರುಕಟ್ಟೆ, ಅರುಣ್ ಗುರುವಾಯನಕೆರೆ, ಜಗದೀಶ್ ಕನ್ನಾಜೆ, ಸೀತಾರಾಮ ಬೆಳಾಲ್, ವಿಠಲ ಮೂಲ್ಯ, ಸುಂದರ ಹೆಗ್ಡೆ ವೇಣೂರು, ಮೋಹನ್ ಅಂಡಿಂಜೆ, ಚಂದ್ರಕಾಂತ್ ನಿಡ್ಡಾಜೆ,ರಕ್ಷಿತ್ ಪಣೆಕ್ಕರ,ಗಣೇಶ್ ಗೌಡ ನಾವೂರು,ಜನಾರ್ಧನ‌ ಗೌಡ ಗೇರುಕಟ್ಟೆ, ಈಶ್ವರ ಬೈರ, ನವೀನ್ ನೆರಿಯ, ಗೀರೀಶ್ ಡೋಂಗ್ರೆ, ಜಯಾನಂದ ಕಲ್ಲಾಪು, ಭಾರತಿ ಎಸ್ ಶೆಟ್ಟಿ,ಆಶಾಲತಾ ಕುವೆಟ್ಟು ,ಪ್ರದೀಪ್ ಶೆಟ್ಟಿ, ಉದಯ ಬಂದಾರು, ಶುಭಕರ ಪೂಜಾರಿ ಕುದ್ಯಾಡಿ,ರವಿ ಪೂಜಾರಿ ಹಾರಡ್ಡೆ, ಪ್ರಕಾಶ್ ಜೈನ್ ಮಲವಂತಿಗೆ, ಪ್ರಭಾಕರ ಆಚಾರ್ಯ ಸವಣಾಲು, ದಿನೇಶ್ ಸೋಣಂದೂರು ಮೊದಲಾದವರು ಉಪಸ್ಥಿತರಿದ್ದರು.

Related posts

ಮಿತ್ತಬಾಗಿಲು: ಹೆಚ್ಚಿದ ಕಾಡಾನೆ ಹಾವಳಿ: ಗ್ರಾಮಸ್ಥರಲ್ಲಿ ಆತಂಕ

Suddi Udaya

ಬೆಳ್ತಂಗಡಿ: ಜಾಮೀನು ಅರ್ಜಿ ಸಲ್ಲಿಸಿದ ಚಿನ್ನಯ್ಯ ಪರ ವಕೀಲರು

Suddi Udaya

ನೀಟ್ ಪರೀಕ್ಷೆ ಅಕ್ರಮ, ರಾಷ್ಟ್ರೀಯ ಯುವ ಕಾಂಗ್ರೆಸ್ ನಿಂದ ದೆಹಲಿಯಲ್ಲಿ ಸಂಸತ್ ಮುತ್ತಿಗೆ : ದೆಹಲಿ ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

Suddi Udaya

ಅಳದಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಹಾಗೂ ಆಡಳಿತ ಮಂಡಳಿಯ ವಿರುದ್ಧ ಮಾನಹಾನಿಕರ ಪೋಸ್ಟ್: ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವ ಕಿಡಿಗೇಡಿಗಳ ವಿರುದ್ಧ ಅಳದಂಗಡಿ ಸತ್ಯದೇವತೆ ದೇವಸ್ಥಾನದಲ್ಲಿ ಪ್ರಾರ್ಥನೆ

Suddi Udaya

ಅಳದಂಗಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ ಮತ್ತು ಪೋಷಕರ ಸಭೆ

Suddi Udaya

ವಸಂತ ಬಂಗೇರರ ಉತ್ತರಕ್ರಿಯೆ ಅಂಗವಾಗಿ ಅಭಿಮಾನಿಗಳ ಸಮಾಲೋಚನಾ ಸಭೆ

Suddi Udaya
error: Content is protected !!