ಬೆಳ್ತಂಗಡಿ: ಸುಮಾರು 46 ವರ್ಷಗಳ ಪರಂಪರೆಯಿರುವ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯನ್ನು ಯುವವಾಹಿನಿ ಬೆಳ್ತಂಗಡಿ ಘಟಕದ ಪದ ಪ್ರದಾನ ಸಮಾರಂಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಸನ್ಮಾನ ಸ್ವೀಕರಿಸಿ,ಯುವವಾಹಿನಿ ಘಟಕದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ, ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಗುರುರಾಜ್, ನಿಕಟಪೂರ್ವಾಧ್ಯಕ್ಷ ಸದಾಶಿವ ಊರ, ಪ್ರಮುಖರಾದ ಎಂ.ಕೆ ಪ್ರಸಾದ್,ಸುಂದರ ಪೂಜಾರಿ ಬೆಳ್ತಂಗಡಿ,ಬಳಂಜ ಸಂಘದ ಸದಸ್ಯರಾದ ಪತ್ರಕರ್ತ ಮನೋಹರ್ ಬಳಂಜ, ರಂಜಿತ್ ಹೆಚ್.ಡಿ, ಯತೀಶ್ ವೈ.ಎಲ್,ಅಮೃತಾ ಎಸ್ ಕೋಟ್ಯಾನ್, ಬೇಬಿ ಸಾನ್ವಿ ಎಸ್ ಕೋಟ್ಯಾನ್ ಹಾಗೂ ಇತರರು ಉಪಸ್ಥಿತರಿದ್ದರು.