23.6 C
ಪುತ್ತೂರು, ಬೆಳ್ತಂಗಡಿ
April 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಂಡಿಂಜೆ: ನವೋದಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಇದರ 27 ನೇ ವರ್ಷದ ವಿಶ್ವಕರ್ಮ ಪೂಜೆ

ಅಂಡಿಂಜೆ ಗ್ರಾಮದ ನವೋದಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಇದರ 27 ನೇ ವರ್ಷದ ವಿಶ್ವಕರ್ಮ ಪೂಜೆಯನ್ನು ವೇಣೂರು ಪ್ರಕಾಶ್ ಪುರೋಹಿತರ ಆಚಾರ್ಯತ್ವದಲ್ಲಿ ಜರಗಿಸಲಾಯಿತು.

ಸಂಘದ ಅಧ್ಯಕ್ಷ ಪ್ರಭಾಕರ ಆಚಾರ್ಯರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಮುಖ್ಯ ಅತಿಥಿಗಳಾಗಿ ಕಾರ್ಕಳ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ, ಅಮರ ಶಿಲ್ಪಿ ಜಕಣಾಚಾರ್ಯ ಪ್ರಶಸ್ತಿ ಪುರಸ್ಕೃತ ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು, ಮೂಡಬಿದ್ರಿ ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಶಾಂತಲಾ ಸೀತಾರಾಮ ಆಚಾರ್ಯ, ಮೂಡಬಿದ್ರಿಯ ಉದ್ಯಮಿ ಗಣೇಶ ಆಚಾರ್ಯ ಹೊಸ್ಮಾರ್, ಕೂಡುವಳಿಕೆ ಮೊಕ್ತೇಸರ ರಾಧಾಕೃಷ್ಣ ಆಚಾರ್ಯ ಕಜೆ, ಹಾಗೂ ಪುರೋಹಿತ್ ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಕಂಪೆನಿಗಳಲ್ಲಿ ಉದ್ಯೋಗವನ್ನು ತೊಡಗಿಸಿಕೊಂಡಿದ್ದು ,ಪ್ರಸ್ತುತ ಅರ್ವ ಎಂಟರ್ಪ್ರೈಸಸ್ ಎಂಬ ಸಂಸ್ಥೆಯಲ್ಲಿ ಬೀಡಿ, ಗೇರುಬೀಜ ಸಮೇತ ವಿವಿಧ ಕಂಪೆನಿಗಳಿಗೆ ಭವಿಷ್ಯನಿಧಿ(ಪಿ ಎಫ್) ಮಾರ್ಗದರ್ಶಕರಾಗಿ ಯಶಸ್ವಿಯಾಗಿದ್ದು, ಅದಕ್ಕಾಗಿ ವಿವಿಧ ಕಂಪೆನಿಗಳಿಂದ ಪುರಸ್ಕೃತ ಸುಬ್ರಹ್ಮಣ್ಯ ಆಚಾರ್ಯ ಪಾಲಬೆ ಅರುವ ,ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿ ಆದರ್ಶ್ ಅಂಡಿಂಜೆ, 2024 ರ ಪಿಯುಸಿ ಪರೀಕ್ಷೆಯಲ್ಲಿ ಸರಕಾರಿ ಪ ಪೂ ಕಾಲೇಜಿನಲ್ಲಿ ಅತ್ಯಧಿಕ ಅಂಕ ಗಳಿಸಿರುವ ಕು.ಸಾನಿಧ್ಯ ಬಿ ಕೆ ಆಚಾರ್ಯ ಇವರನ್ನು ಗೌರವಿಸಿ ಅಭಿನಂದಿಸಲಾಯಿತು.

ಡಿ ಭಾಸ್ಕರ ಆಚಾರ್ಯರು ಪ್ರಾರ್ಥನೆಯೊಂದಿಗೆ ಸ್ವಾಗತಿಸಿದ ಕಾರ್ಯಕ್ರಮವನ್ನು ಕು ಸಾನಿಧ್ಯ ಬಿ ಕೆ ನಿರೂಪಿಸಿದರು.

Related posts

ಪಡಂಗಡಿ: ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ಚಂಡಿಕಾ ಹೋಮ

Suddi Udaya

ಬೆಳ್ತಂಗಡಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಉಸ್ಮಾನ್ ಗರ್ಡಾಡಿ ರವರಿಗೆ ಮುಖ್ಯಮಂತ್ರಿ ಚಿನ್ನದ ಪದಕ

Suddi Udaya

ನಿಡ್ಲೆ: ನಿವೃತ್ತ ಶಿಕ್ಷಕ ರಾಮಣ್ಣ ಪೂಜಾರಿ ನಿಧನ

Suddi Udaya

ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಸಾಧನೆಗೈದ “ಮುಸ್ಕಾನ್ ಕೌಸರ್” ರಿಗೆ ಬ್ಯಾರೀಸ್‌ ವೆಲ್‌ಫೇ‌ರ್ ಅಸೋಸಿಯೇಷನ್ ಮೂಲಕ ಶಿಕ್ಷಣ ಸಚಿವರಿಂದ ಸನ್ಮಾನ

Suddi Udaya

ಜು.26: ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ “ಕಾರ್ಗಿಲ್ ವಿಜಯ ದಿವಸ್” ಪಂಜಿನ ಮೆರವಣಿಗೆ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ನಿಂದ 4 ಮನೆ, 3 ತಂಗುದಾಣ ಹಸ್ತಾಂತರ : 50 ನೇ ವರ್ಷದ ಪ್ರಯುಕ್ತ ವೇದಿಕೆಯಲ್ಲಿ 50 ಸೇವಾ ಚಟುವಟಿಕೆ

Suddi Udaya
error: Content is protected !!