ಬೆಳ್ತಂಗಡಿ: ಪುತ್ತೂರು ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿ, ಬೆಳ್ತಂಗಡಿ ಕೆನರಾ ಬ್ಯಾಂಕ್ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ದ.ಕ.ಜಿಲ್ಲಾ ಪಂಚಾಯತ್, ತಾಲೂಕು ಸಂಜೀವಿನಿ ಅಭಿಯಾನ ನಿರ್ವಹಣಾ ಘಟಕ , ಬೆಳ್ತಂಗಡಿ ತಾಲೂಕು ಪಂಚಾಯತ್ ಇದರ ಆಶ್ರಯದಲ್ಲಿ ಸಂಜೀವಿನಿ ಸ್ವ ಸಹಾಯ ಸಂಘಗಳಿಗೆ ಸಾಲ ವಿತರಣಾ ಕಾರ್ಯಕ್ರಮ ಮತ್ತು ಕೃಷಿ ಸಖಿ, ಪಶು ಸಖಿ, ಸ್ವಚ್ಚತಾ ಸಿಬ್ಬಂದಿ ಹಾಗೂ ಸಂಜೀವಿನಿ ಸದಸ್ಯರಿಗೆ ವಿಮಾ ನೋಂದಣಿ ಕಾರ್ಯಕ್ರಮ, ಜನಸುರಕ್ಷಾ ಯೋಜನೆಗಳ ಸಂಪೂರ್ಣತಾ ಅಭಿಯಾನ ಫೆ.20 ರಂದು ಬೆಳ್ತಂಗಡಿ ತಾಲೂಕು ಪಂಚಾಯತ್ ನಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿ ವಿಭಾಗೀಯ ಅಧಿಕಾರಿ ಜಯಪ್ರತಾಪ್ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಯರಾಮ್, ತಾ.ಪಂ.ಇಓ ಭವಾನಿ ಶಂಕರ್ ಎನ್., ಪುತ್ತೂರು ಕೆನರಾ ಬ್ಯಾಂಕ್ ಪ್ರಬಂಧಕ ಅರುಣ್ ನಾಯಕ್, ಜಿಲ್ಲಾ ಪಂಚಾಯತ್ ನ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್, ಉಜಿರೆ ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ, ಬೆಳ್ತಂಗಡಿ ಕೆನರಾ ಬ್ಯಾಂಕ್ ಪ್ರಬಂಧಕ ಪ್ರತಾಪ್ ನಾಯಕ್, ಕೆನರಾ ಬ್ಯಾಂಕ್ ಆರ್ಥಿಕ ಸೇರ್ಪಡಾ ವಿಭಾಗದ ಅರ್ನಾಬ್ ರಾಯ್, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಯರಾಮ್ ಹಾಗೂ ಸಂಜೀವಿನಿ ತಾಲೂಕು ವ್ಯವಸ್ಥಾಪಕ ನಿತೀಶ್, ಉಪಸ್ಥಿತರಿದ್ದರು.
ಬೆಳ್ತಂಗಡಿ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಉಷಾ ನಾಯಕ್, ತಾಲೂಕು ಸಂಜೀವಿನಿ ಸಿಬ್ಬಂದಿಗಳಾದ ಜಯಾನಂದ ಲಾಯಿಲ, ಭರತ್, ವೀಣಾಶ್ರೀ, ವಿನೋದ್ ಪ್ರಸಾದ್ ಕಲ್ಲಾಜೆ , ಶ್ರೀಕಲಾ ಹಾಗೂ ಸಂಜೀವಿನಿ ಒಕ್ಕೂಟದ ಸದಸ್ಯರು, ಕೃಷಿ ಮತ್ತು ಪಶು ಸಖಿ ಹಾಗೂ ಸ್ವಚ್ಚತಾ ಸಿಬ್ಬಂದಿಗಳು ಭಾಗವಹಿಸಿದ್ದರು. ಇಂದಬೆಟ್ಟು ಪಶು ಸಖಿ ಕವಿತಾ ಪ್ರಾರ್ಥಿಸಿದರು. ಸ್ವಸ್ತಿಕ್ ಜೈನ್ ನಿರೂಪಿಸಿದರು.