ಕಕ್ಕಿಂಜೆ: ಕಳೆದ ಎರಡು ದಿನಗಳ ಹಿಂದೆ ಕಕ್ಕಿಂಜೆ ಉನ್ನತೀಕರಿಸಿದ ಹಿ.ಪ್ರಾ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹೆಜ್ಜೇನು ಕಡಿದಿದ್ದು ಶಾಲಾ ಸಮೀಪದ ಮರದಲ್ಲಿ ಗೂಡು ಕಟ್ಟಿದ್ದ ಹೆಜ್ಜೇನುಗಳನ್ನು ಓಡಿಸಲಾಗಿದೆ.
ಅರಣ್ಯ ಇಲಾಖೆ, ಸ್ಥಳಿಯರು ಸೇರಿ ಹೊಗೆ ಹಾಕಿ ಜೇನುನೊಣಗಳನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಜ್ಜೇನು ದಾಳಿಯಿಂದ ಕಳೆದ ಮೂರು ದಿನಗಳಿಂದ ಶಾಲೆಗೆ ರಜೆ ನೀಡಲಾಗಿದ್ದು ಗುರುವಾರ ಮತ್ತೆ ತರಗತಿಗಳು ಆರಂಭವಾಗಿವೆ.