ಕೊಕ್ಕಡ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಕಾಯರ್ತಡ್ಕ ಕಳೆಂಜ ಗಾಳಿತೋಟ ಎಂಬಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡಿರುವ ಘಟನೆ ಗುರುವಾರದಂದು ಮಧ್ಯಾಹ್ನ ನಡೆದಿದೆ.
ಭಜರಂಗದಳ ಹಾಗೂ ಹಿಂದೂ ಕಾರ್ಯಕರ್ತರ ಖಚಿತ ಮಾಹಿತಿ ಮೇರೆಗೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಆಟೋ ರಿಕ್ಷಾ ಮತ್ತು ಗೋವನ್ನು ವಶಪಡಿಸಿಕೊಂಡು, ಕಳೆಂಜದಲ್ಲಿರುವ ಗೋಶಾಲೆಗೆ ಗೋವನ್ನು ಒಪ್ಪಿಸಲಾಗಿದೆ.
ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಲಾಲು ವರ್ಕಿ ಕುದ್ದ ಮತ್ತು ಇಪನ್ ಯಾನೆ ಇರಾನಿ ಕುದ್ದ ಎಂಬವರನ್ನು ಧರ್ಮಸ್ಥಳ ಪೋಲಿಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.