25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜಪಾನ್ ದೇಶದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಕಾರ್ಯಕ್ರಮ SAKURA ಗೆ ಮೂಡುಬಿದಿರೆಯ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಆಯ್ಕೆ

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ರಾಹುಲ್ ಪಿ ಹೆಗ್ಡೆ, INSPIRE ಮಾನಕ್ ವಿಜ್ಞಾನ ಯೋಜನೆಯಡಿ ಪ್ರಸ್ತುತ ಪಡಿಸಿದ “Animal Vital Monitoring system” ಎಂಬ ಸಂಶೋಧನಾತ್ಮಕ ವಿಜ್ಞಾನ ಮಾದರಿ ಜಪಾನಿನ ವಿಜ್ಞಾನ ಹಾಗೂ ತಂತ್ರಜ್ಞಾನ ಸಂಸ್ಥೆಯು ಆಯೋಜಿಸುವ ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮ SAKURA ಗೆ ಆಯ್ಕೆಗೊಂಡಿದೆ.


ಜೂನ್ 15 ರಿಂದ 21ರ ವರೆಗೆ ಜಪಾನಿನಲ್ಲಿ ಜರಗುವ ಈ ವಿಜ್ಞಾನ ಕಾರ್ಯಕ್ರಮದಲ್ಲಿ ಭಾರತದಿಂದ ಆಯ್ಕೆಗೊಂಡಿರುವ 54 ಮಂದಿ ವಿದ್ಯಾರ್ಥಿಗಳಲ್ಲಿ ರಾಹುಲ್ ಪಿ ಹೆಗ್ಡೆ ಕೂಡ ಓರ್ವನಾಗಿದ್ದಾನೆ.
ಈ ವಿಜ್ಞಾನ ಮಾದರಿ ಪ್ರಾಣಿಗಳ ಆರೋಗ್ಯ ತಪಾಸಣೆಗೆ ಸಂಬಂಧಿಸಿದ್ದು, ಪ್ರಾಣಿಗಳ ಆರೋಗ್ಯದಲ್ಲಿ ಏರುಪೇರು ಕಂಡುಬಂದಲ್ಲಿ ಇದು ಎಚ್ಚರಿಕೆ ಗಂಟೆಯೊಂದಿಗೆ ಮಾಹಿತಿಯನ್ನು ನೀಡುವ ವೈಜ್ಞಾನಿಕ ಅನ್ವೇಷಣೆಯಾಗಿದೆ..
ಎಕ್ಸಲೆಂಟ್ ATL ಲ್ಯಾಬ್ ಅಡಿಯಲ್ಲಿ INSPIRE ಯೋಜನೆಯಡಿ 2023ನೇ ಸಾಲಿನಲ್ಲಿ ವಿಜ್ಞಾನ ಶಿಕ್ಷಕರ ಮಾರ್ಗದರ್ಶನದಲ್ಲಿ ರಾಹುಲ್ ಪಿ ಹೆಗ್ಡೆ ಸಿದ್ದಪಡಿಸದ್ದ ಈ ಮಾದರಿ ಈ ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡು ಎಲ್ಲರ ಗಮನ ಸೆಳೆದಿತ್ತು.


ಕೇಂದ್ರ ಸರ್ಕಾರದ “ಮೇಕ್ ಇನ್ ಇಂಡಿಯಾ” ಅಭಿಯಾನದಡಿಯಲ್ಲಿ ಸಂಸ್ಥೆಯ ಅಧ್ಯಕ್ಷರ ಮತ್ತು ಕಾರ್ಯದರ್ಶಿಯವರ ಮಾರ್ಗದರ್ಶನದಲ್ಲಿ ವೈಜ್ಞಾನಿಕ ಸಂಶೋಧನೆಗಳನ್ನು ಅತ್ಯಂತ ಆಸಕ್ತಿಯಲ್ಲಿ ಮಾಡುತ್ತಿರುವ ರಾಹುಲ್ ಪಿ ಹೆಗ್ಡೆ ಭವಿಷ್ಯದಲ್ಲಿ ತನ್ನದೇ ಆದ ಒಂದು ದೊಡ್ಡ ಕೊಡುಗೆಯನ್ನು ವಿಜ್ಞಾನ ಕ್ಷೇತ್ರಕ್ಕೆ ನೀಡುವ ಕನಸು ಹೊತ್ತಿದ್ದಾನೆ.


ಭಾರತೀಯ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ಆಯೋಜಿಸುವ INSPIRE ಕಾರ್ಯಕ್ರಮದಲ್ಲಿ ಪ್ರತಿವರ್ಷವೂ ಎಕ್ಸಲೆಂಟ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ರೂ.10,000 ಸ್ಕಾಲರ್‌ಶಿಪ್‌ನೊಂದಿಗೆ ಜಿಲ್ಲಾ ರಾಜ್ಯ-ರಾಷ್ಟ್ರಮಟ್ಟಕ್ಕೆ ಆಯ್ಕೆಗೊಳ್ಳುತ್ತಿದ್ದಾರೆ.
ಆಯ್ಕೆಗೊಂಡ ವಿದ್ಯಾರ್ಥಿಯನ್ನು ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್, ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.

Related posts

ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಬಳಿ ಕುಸಿದು ಬಿದ್ದು ವ್ಯಕ್ತಿ ಸಾವು

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾದಿಯರ ದಿನಾಚರಣೆ

Suddi Udaya

ನಾಲ್ಕೂರು: ಸೂಳಬೆಟ್ಟು ಮುರಳೀಧರ ಗೋಖಲೆ ರವರ ಮನೆಗೆ ಎಡತೊರೆ ಶ್ರೀ ಶಂಕರ ಭಾರತಿ ಶ್ರೀಗಳವರ ಭೇಟಿ: ಸ್ತೋತ್ರ ಪಾಠಶಾಲೆಗೆ ಚಾಲನೆ

Suddi Udaya

ಯುಟ್ಯೂಬರ್ ಸಮೀರ್ ಎಂಡಿ ವಿರುದ್ದ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ‌ ದಾಖಲು

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ (ದುರ್ಗಾದೇವಿ) ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ: ಧಾರ್ಮಿಕ ಸಭೆ

Suddi Udaya

ರಾಜ್ಯ ಮಟ್ಟದ ಪ್ರೌಢ ಶಾಲಾ ಬಾಲಕರ ವಿಭಾಗದ ಕಬ್ಬಡಿ ಪಂದ್ಯಾಟ: ಸುಲ್ಕೇರಿ ಶ್ರೀರಾಮ ಪ್ರೌಢ ಶಾಲಾ ವಿದ್ಯಾರ್ಥಿಗಳು ಪ್ರಥಮ ಸ್ಥಾನ

Suddi Udaya
error: Content is protected !!