36.4 C
ಪುತ್ತೂರು, ಬೆಳ್ತಂಗಡಿ
February 23, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಫೆ.23: ಕುತ್ಲೂರು ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ನ ಸಂಯುಕ್ತ ಆಶ್ರಯದಲ್ಲಿ 12ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಮ್ಯಾಟ್‌ ಕಬಡ್ಡಿ ಪಂದ್ಯಾಟ ಹಾಗೂ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಕುತ್ಲೂರು : ಶಿವಶಕ್ತಿ ಫ್ರೆಂಡ್ಸ್ ಕ್ಲಬ್ (ರಿ) ಕುತ್ಲೂರು ಇದರ ಸಂಯುಕ್ತ ಆಶ್ರಯದಲ್ಲಿ 12ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಬೆಳ್ತಂಗಡಿ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಇದರ ಸಹಭಾಗಿತ್ವದಲ್ಲಿ ಪುರುಷರ ವಿಭಾಗದ ಪ್ರೋ ಮಾದರಿಯ ಗ್ರಾಮ ಸೀಮಿತ ಮುಕ್ತ ಮ್ಯಾಟ್‌ ಕಬಡ್ಡಿ ಪಂದ್ಯಾಟ ಶಿವಶಕ್ತಿ ಟ್ರೋಫಿ 2025 ಹಾಗೂ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಫೆ. 23 ರಂದು ಬೆಳಗ್ಗೆ ಗಂಟೆ 9-00ಕ್ಕೆ ಕುತ್ಲೂರು ಬಂತ್ರುಗುಡ್ಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.

ಸಮಾರಂಭದ ಉದ್ಘಾಟನೆಯನ್ನು ಕೊಕ್ರಾಡಿ ಅತ್ರಿಜಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅರ್ಚಕರು ರಮೇಶ್ ಭಟ್ , ಮೆಡಿಕಲ್ ಕ್ಯಾಂಪ್‌ ಉದ್ಘಾಟನೆಯನ್ನು ಡಾ। ಪ್ರಸಾದ್ ಬಿ. ಶೆಟ್ಟಿ ವಿಜಯ ಪಾಲಿಕ್ಲಿನಿಕ್ ಹೊಸ್ಮಾರು, ಕ್ರೀಡಾಂಗಣ ಉದ್ಘಾಟನೆಯನ್ನು ಪ್ರವೀಣ್ ಶಿಲ್ಪಲೋಕ ಕುತ್ಲೂರು ನೆರವೇರಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾಕರ ಬುಣ್ಣು ಕಾಡಬೆಟ್ಟು ಕುತ್ಲೂರು ವಹಿಸಲಿದ್ದಾರೆ.

ಶಿಬಿರದ ವಿಶೇಷತೆಗಳು : ವೈದ್ಯಕೀಯ ವಿಭಾಗ , ಚರ್ಮದ ವಿಭಾಗ, ಸ್ತ್ರೀರೋಗ ವಿಭಾಗ, ಮಕ್ಕಳ ವಿಭಾಗ, ಕಿವಿ ಮೂಗು ಗಂಟಲು ವಿಭಾಗ, ದಂತ ಚಿಕಿತ್ಸಾ ವಿಭಾಗ, ಹೃದಯ ವಿಭಾಗ ,ಕಣ್ಣಿನ ವಿಭಾಗ , ಶಸ್ತ್ರಚಿಕಿತ್ಸಾ ವಿಭಾಗ , ಎಲುಬು ಮತ್ತು ಕೀಲು ವಿಭಾಗ , ಬಿ.ಪಿ. ಶುಗರ್ ಮತ್ತು ರಕ್ತದ ಗುಂಪು ತಪಾಸಣೆ ನಡೆಯಲಿದೆ.

ಅದೇ ದಿನ ರಾತ್ರಿ ಗಂಟೆ 9.30ಕ್ಕೆ ಕಾಪು ರಂಗತರಂಗ ಕಲಾವಿದರ ಈ ವರ್ಷದ ನೂತನ ಕುಟ್ಯಾಣ್ಣನ ಕುಟುಂಬ ತುಳು ಸಾಂಸಾರಿಕ ಹಾಸ್ಯಮಯ ನಾಟಕ ನಡೆಯಲಿದೆ.

Related posts

ಮಚ್ಚಿನ ಗ್ರಾಮದ ಕುತ್ತಿನ ನಿವಾಸಿ ಧರ್ಣಪ್ಪ ಮೂಲ್ಯ ನಿಧನ

Suddi Udaya

ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಮಹಾಸಬೆ

Suddi Udaya

ರಾಷ್ಟ್ರೀಯ ಯೋಗಾಸನ ಕ್ರೀಡಾ ಒಕ್ಕೂಟದ ಉಪಾಧ್ಯಕ್ಷರಾಗಿ ಡಾ. ಐ. ಶಶಿಕಾಂತ ಜೈನ್

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶ್ರೀ ಮಂಜುನಾಥ ದಳದ ಗೈಡ್ ವಿದ್ಯಾರ್ಥಿನಿ ನಿಷ್ಕ ಹೆಗ್ಡೆ ಇವರ ಕೈಚಳಕದಿಂದ ಮೂಡಿದ ಪರಿಸರ ಸ್ನೇಹಿ ಗಣಪತಿ

Suddi Udaya

ಬೆಳ್ತಂಗಡಿ ತಾಲೂಕು ಬಿಎಂಎಸ್ ರಿಕ್ಷಾ ಚಾಲಕರ ಸಂಘದ ಮಹಾಸಭೆ

Suddi Udaya

ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಬರೋಡಾರವರಿಗೆ “ಬಂಟೆರ್ನ ರತ್ನ ಪ್ರಶಸ್ತಿ

Suddi Udaya
error: Content is protected !!