23.1 C
ಪುತ್ತೂರು, ಬೆಳ್ತಂಗಡಿ
February 23, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಂದಿರಗಳ ರಕ್ಷಣೆ ದೃಷ್ಟಿಯಿಂದ ಕರ್ನಾಟಕ ಮಂದಿರ ಮಹಾಸಂಘದ ವತಿಯಿಂದ ಬೆಳ್ತಂಗಡಿ ತಹಶೀಲ್ದಾರರಿಗೆ ಮನವಿ

ಕರ್ನಾಟಕ ಮಂದಿರ ಮಹಾಸಂಘವು 15 ಫೆಬ್ರವರಿ 2025 ರಂದು ಬೆಳ್ತಂಗಡಿ ಲಾಯಿಲದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾಭವನದಲ್ಲಿ 1 ದಿನದ ತಾಲೂಕು ಮಟ್ಟದ ಮಂದಿರ ಅಧಿವೇಶನವನ್ನು ಏರ್ಪಡಿಸಲಾಗಿತ್ತು. ಈ ಅಧಿವೇಶನದಲ್ಲಿ 80 ಕ್ಕೂ ಅಧಿಕ ದೇವಸ್ಥಾನಗಳ ವಿಶ್ವಸ್ಥರು, ಅರ್ಚಕರು ಭಾಗವಹಿಸಿದ್ದರು. ದೇವಸ್ಥಾನಗಳ ರಕ್ಷಣೆ ದೃಷ್ಟಿಯಿಂದ ಅಧಿವೇಶನದಲ್ಲಿ ಕೆಲವು ಮುಖ್ಯ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಈ ನಿರ್ಣಯವನ್ನು ಸರಕಾರವು ಅನುಷ್ಠಾನಕ್ಕೆ ತರಬೇಕೆಂದು ಬೆಳ್ತಂಗಡಿ ತಹಶೀಲ್ದಾರರಾದ ಪೃಥ್ವಿ ಸಾನಿಕಂ ಇವರಿಗೆ ಮನವಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮಂದಿರ ಮಹಾ ಸಂಘದ ತಾಲೂಕಿನ ಸಮನ್ವಯಕರು ಜಯಸಾಲಿಯಾನ್ ಬಲೆಂಜ, ಸದಾಶಿವ ಹೊಳ್ಳ , ಗಣಪತಿ ಸುಬ್ರಮಣ್ಯ ದೇವಸ್ಥಾನ ಮಲೆಬೆಟ್ಟು. ವಾಮನ ಬಾಳಿಗ, ಶ್ರೀ ಮೂಜುಲ್ನಾಯ ಬ್ರಹ್ಮ ದೈವಸ್ಥಾನ ಪಡಂಗಡಿ . ಸಂತೋಷ್ ಕುಮಾರ್ ಶ್ರೀ ನಾಗಂಬಿಕಾ ದೇವಸ್ಥಾನ ಮುಂಡೂರು. ಹರೀಶ ಮುದ್ದಿನಡ್ಕ, ಶ್ರೀ ರಾಮ ಭಜನಾ ಮಂದಿರ ಪೆರಿಯಡ್ಕ. ಹಾಗೂ ಯೋಗೀಶ್ ಕೆಂಬರ್ಜೆ ಇವರುಗಳು ಉಪಸ್ಥಿತರಿದ್ದರು.

Related posts

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ

Suddi Udaya

ಧರ್ಮಸ್ಥಳದ ಬಿ. ಪ್ರಕಾಶ ದೇವಾಡಿಗರವರು ಸ್ಯಾಕ್ಸೋಪೋನ್ ಕಾರ್ಯಕ್ರಮ ನೀಡಲು ಮೂರನೇ ಬಾರಿಗೆ ಅಮೇರಿಕಕ್ಕೆ

Suddi Udaya

ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ ಛಾಯಾಗ್ರಹಕ‌ ರಾಮಕೃಷ್ಣ ರೈ ಅವರಿಗೆ ಸನ್ಮಾನ

Suddi Udaya

ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಶ್ರೀರಾಮೋತ್ಸವ ಸಂಭ್ರಮ

Suddi Udaya

ಡಿ.14 -20: ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಜೆಸಿ ಸಪ್ತಾಹ- 2024: ಸಾಧಕರಿಗೆ ಸನ್ಮಾನ, ಸಮಾಜಸೇವಾ ಸಂಘಟನೆಗಳಿಗೆ ಸೇವಾಶ್ರೀ ಪುರಸ್ಕಾರ, ಮನೋರಂಜನಾ ಕಾರ್ಯಕ್ರಮ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ಬೇಸಿಗೆ ಶಿಬಿರ

Suddi Udaya
error: Content is protected !!