September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿಯಿಂದ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಹಸಿರು ಹೊರೆಕಾಣಿಕೆ: ಶಾಸಕ ಹರೀಶ್ ಪೂಂಜರಿಂದ ಚಾಲನೆ

ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆ.25 ರಿಂದ ಮಾರ್ಚ್ 5ರ ತನಕ ನೆರವೇರಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಬೆಳ್ತಂಗಡಿ ತಾಲೂಕಿನಿಂದ ಹೊರಡಲಿರುವ ಹಸಿರು ಹೊರೆ ಕಾಣಿಕೆಗೆ ಶಾಸಕ ಹರೀಶ್ ಪೂಂಜರವರು ಚಾಲನೆ ನೀಡಿದರು.

ಹೊರೆಕಾಣಿಕೆಯು ಗುರುವಾಯನಕೆರೆ ಬಂಟರ ಭವನದಿಂದ ಮೆರವಣಿಗೆಯ ಮೂಲಕ ಹೊರಟು ಮಾರಿಗುಡಿ ಅಮ್ಮನವರ ಸನ್ನಿಧಿಗೆ ತಲುಪಲಿದೆ. ಇದರ ಜೊತೆಗೆ ಬೆಳ್ತಂಗಡಿ ತಾಲೂಕಿನಿಂದ 100 ಕ್ವಿಂಟಲ್ ಅಕ್ಕಿ ಸನ್ನಿಧಾನಕ್ಕೆ ತಲುಪಲಿದೆ ಎಂದು ಶಾಸಕ ಹರೀಶ್ ಪೂಂಜರು ತಿಳಿಸಿದರು.

ಈ ಸಂದರ್ಭದಲ್ಲಿ ನ.ಪಂ. ಅಧ್ಯಕ್ಷ ಜಯಾನಂದ ಗೌಡ, ಬೆಳ್ತಂಗಡಿ ಬಂಟರ ಸಂಘ ಅಧ್ಯಕ್ಷ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ, ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಶೆಟ್ಟಿ ಹಿಬರೋಡಿ, ರಾಜೇಶ್ ಶೆಟ್ಟಿ ನವಶಕ್ತಿ ಉದ್ಯಮಿ , ಕಿರಣ್ ಚಂದ್ರ ಉದ್ಯಮಿ , ಪುಷ್ಪರಾಜ್ ಶೆಟ್ಟಿ ಉದ್ಯಮಿ, ಕಾಪು ಮಾರಿಗುಡಿ ನವ ಲೇಖನ ಯಜ್ಞ ಇದರ ಬೆಳ್ತಂಗಡಿ ಸಮಿತಿಯ ಸಂಚಾಲಕ ಕಿರಣ್ ಕುಮಾರ್ ಶೆಟ್ಟಿ, ವಿಜಯ ಕ್ರೆಡಿಟ್ ಬ್ಯಾಂಕ್ ಸೊಸೈಟಿ ಅಧ್ಯಕ್ಷ ಅಜಿತ್ ಶೆಟ್ಟಿ ಕೊರಿಯರು, ದಿನೇಶ್ ಗೌಡ ಉದ್ಯಮಿ, ಸುಲ್ಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ರವಿ ಶೆಟ್ಟಿ , ರಾಷ್ಟ್ರೀಯ ಸ್ವಯಂ ಸೇವಕ ಸಂಘ ಜಿಲ್ಲಾ ಸಹ ಕಾರ್ಯವಾಹ ಸಂತೋಷ್ ಸಾಲಿಯಾನ್, ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಬೆಳಾಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ, ಮುಂಡಾಜೆ ಕೃಷಿ ಪತ್ತಿನ ಸಹಕಾರಿ ಸಂಘ ನಿರ್ದೇಶಕಿ ಅಶ್ವಿನಿ ಹೆಬ್ಬಾರ್, ಯುವ ಬಂಟರ ವಿಭಾಗದ ಅಧ್ಯಕ್ಷ ಪ್ರತೀಕ್ ಶೆಟ್ಟಿ ನೊಚ್ಚ, ಪತ್ರಿಕಾ ವರದಿಗಾರ ಅರವಿಂದ ಹೆಬ್ಬಾರ್, ಬೆಳ್ತಂಗಡಿ ಸುದ್ದಿ ಉದಯ ವಾರ ಪತ್ರಿಕೆ ವ್ಯವಸ್ಥಾಪಕ ನಿರ್ದೇಶಕರು, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ತುಕಾರಾಂ, ವಿವಿಧ ಗ್ರಾಮ ಪಂಚಾಯಿತಿ ಸದಸ್ಯರು, ರಾಷ್ಟ್ರೀಯ ಸೇವಾ ಯೋಜನೆ ಎಸ್.ಡಿ.ಎಮ್ ಉಜಿರೆ ಸ್ವಯಂಸೇವಕರು, ಊರಿನ ಹಿರಿಯರು, ಗೌರವಾನ್ವಿತರು ನಾಗರಿಕರು ಉಪಸ್ಥಿತರಿದ್ದರು.

ವಾಣಿ ಕಾಲೇಜು ಉಪನ್ಯಾಸಕ ಶಂಕರ್ ರಾವ್ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ ಶಿಶು ಅಭಿವೃದ್ಧಿ ಯೋಜನೆಯ ತಾಲೂಕು ಮಟ್ಟದ ಹಳೆ ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya

ನಾಲ್ಕೂರು ಗ್ರಾಮದ ಅಲೈಮಾರ್ ನಲ್ಲಿ ರಸ್ತೆ ದುರಸ್ಥಿ,

Suddi Udaya

ಮಡಂತ್ಯಾರು ಗ್ರಾ.ಪಂ ಮಾಜಿ ಸದಸ್ಯ ಸತೀಶ್ ಶೆಟ್ಟಿ ಕುರ್ಡುಮೆ ನಿಧನ

Suddi Udaya

ಹೊಸಂಗಡಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಬೈಂದೂರಿನಲ್ಲಿ ಶ್ರೀ ಬ್ರಹ್ಮಾನಂದಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ: ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಭೇಟಿ

Suddi Udaya

ಕರಾಟೆ ಪಂದ್ಯಾಟ: ಹೋಲಿ ರಿಡೀಮರ್ ಶಾಲೆಯ ವಿದ್ಯಾರ್ಥಿ ಶಮಂತ್ ತೃತೀಯ

Suddi Udaya
error: Content is protected !!