23 C
ಪುತ್ತೂರು, ಬೆಳ್ತಂಗಡಿ
February 24, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಪಾರೆಂಕಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ, ಮಹಿಳಾ – ಯುವ ಬಿಲ್ಲವ ವೇದಿಕೆ ವತಿಯಿಂದ ಗುರುಪೂಜೆ, ಸಾಧಕರಿಗೆ ಸನ್ಮಾನ – ಸಾಂಸ್ಕೃತಿಕ ಝೇಂಕಾರ

ಮಡಂತ್ಯಾರು: ಮಡಂತ್ಯಾರು ಪಾರೆಂಕಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ, ಮಹಿಳಾ ಮತ್ತು ಯುವ ಬಿಲ್ಲವ ವೇದಿಕೆ ವತಿಯಿಂದ ಗುರುಪೂಜೆ ಫೆ.22ರಂದು ಮಡಂತ್ಯಾರು ಸಮೀಪದ ಕಡ್ತಿಲ ಎಸ್ಟೇಟ್ ನಲ್ಲಿ ಜರುಗಿತು.

ಸಂಘದ ಅಧ್ಯಕ್ಷ ಅಧ್ಯಕ್ಷ ವೆಂಕಪ್ಪ ಪೂಜಾರಿ ಕೋಡ್ಲಕ್ಕೆ ಅಧ್ಯಕ್ಷತೆ ವಹಿಸಿದ್ದರು. ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಪ್ರಾಂಶುಪಾಲ ಡಾ.ನವೀನ್ ಮರಿಕೆ ದಿಕ್ಸೂಚಿ ಭಾಷಣ ಮಾಡಿದರು.

ಬೆಳ್ತಂಗಡಿ ಗುರು ನಾರಾಯಣಸ್ವಾಮಿ ಸೇವಾ ಸಂಘ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಮಡಂತ್ಯಾರು ಗ್ರಾ.ಪಂ.ಅಧ್ಯಕ್ಷೆ ರೂಪ ನವೀನ್ ಕೋಡ್ಲಕ್ಕೆ, ಬೆಳ್ತಂಗಡಿ ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಸುಮತಿ ಪ್ರಮೋದ್, ಬೆಳ್ತಂಗಡಿ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ. ಕೆ. ಪ್ರಸಾದ್, ಮಚ್ಚಿನ ಶ್ರೀ ಗುರು ನಾರಾಯಣ ಸೇವಾ ಸಂಘ ನಿರ್ದೇಶಕ ಪ್ರಮೋದ್ ಕುಮಾರ್ , ಗೌರವಾಧ್ಯಕ್ಷ ಯೋಗೇಶ್ ಪೂಜಾರಿ ಕಡ್ತಿಲ, ಮಾಜಿ ಶಾಸಕ ದಿ. ವಸಂತ ಬಂಗೇರ ಪುತ್ರಿ ಬಿನುತಾ ಬಂಗೇರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವಾರಂ, ಮಾಜಿ ಶಾಸಕ ಪ್ರಭಾಕರ ಬಂಗೇರ, ಪ್ರಮುಖರಾದ ಮೋನಪ್ಪ ಕಂಡೆತ್ಯಾರು, ವಸಂತ್ ಸಾಲ್ಯಾನ್ ಕಾಪಿನಡ್ಕ, ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಸಚಿನ್ ಪೂಜಾರಿ ಅರ್ಭುಂಡ, ಕಾರ್ಯದರ್ಶಿ ಸುಭಾಷ್ ಚಂದ್ರ ಪೂಜಾರಿ ಹಾರಬೆ, ಮಹಿಳಾ ಸಂಘದ ಅಧ್ಯಕ್ಷೆ ಆಶಾ ಉಮೇಶ್ ಕೋಟೆ, ಕಾರ್ಯದರ್ಶಿ ಮಲ್ಲಿಕಾ ಹರಿಶ್ಚಂದ್ರ ಕೋಡ್ಲಕ್ಕೆ, ಯುವ ಬಿಲ್ಲವ ವೇದಿಕೆ ಕಾರ್ಯದರ್ಶಿ ಶರತ್ ಪೂಜಾರಿ ಹಾರಬೆ, ಪ್ರಮುಖರಾದ ಪುನೀತ್ ಕುಮಾರ್ ಮಾಲಾಡಿ, ಪ್ರಶಾಂತ್ ಪಾರೆಂಕಿ, ವಿಶ್ವನಾಥ್ ಪೂಜಾರಿ ಹಾರಾಬೆ, ಸತೀಶ್ ಸುವರ್ಣ, ವಿಶ್ವನಾಥ್ ಪೂಜಾರಿ ಕೋಟೆ, ಗಿರಿಯಪ್ಪ ಪೂಜಾರಿ ಕೋಡ್ಲಕ್ಕೆ, ತುಳಸಿ ಹಾರಬೆ , ಶೇಷಗಿರಿ ನಾಯಕ್ , ಉಮೇಶ್ ಸುವರ್ಣ ಅಲೆಕ್ಕಿ, ಉಮೇಶ್ ಕೋಟೆ, ಯೋಗೀಶ್ ಕೊಡ್ಲಕ್ಕೆ, ನವೀನ್ ಕೊಡ್ಲಕ್ಕೆ ಸಹಿತ ಮತ್ತಿತರರು ಉಪಸ್ಥಿತರಿದ್ದರು.
ಗುರು ಪೂಜೆಯ ಬಳಿಕ ಸಭಾ ಕಾರ್ಯಕ್ರಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಸಮಾಜದ ಪ್ರತಿಭೆಗಳಿಂದ ಸಾಂಸ್ಕೃತಿಕ ಝೇಂಕಾರ ಜರುಗಿತು.

ಸಂಯುಕ್ತ್ ಕಡ್ತಿಲ, ಪ್ರಜ್ಞಾ ಡಿ.ಪಿ.ದೋಟ, ಅನ್ವಿತಾ ನವೀನ್ ಉರ್ಲ, ಹಂಸಿನಿ ಹಾರಾಬೆ, ನವೀನ್ ಕೋಡ್ಲಕ್ಕೆ ಹಾಗೂ ದಿಕ್ಷೀತ್ ಪಾರೆಂಕಿ ಸನ್ಮಾನ ಪತ್ರ ವಾಚಿಸಿದರು. ಪ್ರವೀಣ್ ಕುಮಾರ್ ದೋಟ ಕಾರ್ಯಕ್ರಮ ನಿರೂಪಿಸಿದರು.

ಸಾಧಕರಿಗೆ ಸನ್ಮಾನ:
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಬೂದಿ ಪೂಜಾರಿ ಕೋಟೆ, ಡಾ.ನವೀನ್ ಮರಿಕೆ, ಸತೀಶ್ ಪೂಜಾರಿ ಕೋಟೆ, ಸಚಿನ್ ಕೋಡ್ಲಕ್ಕೆ, ನಿತಿನ್ ಕುಮಾರ್ ಕೋಟೆ ಹಾಗೂ ಪ್ರದೀಪ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

Related posts

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಭಗವದ್ಗೀತಾ ತರಗತಿ ಪ್ರಾರಂಭ

Suddi Udaya

ಅಸೌಖ್ಯದಿಂದ ಬಳಲಿ ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದ ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ ನ.ಪಂ ಉಪಾಧ್ಯಕ್ಷ ಮತ್ತಿತರರು

Suddi Udaya

ಬಾರ್ಯ : ಸುಂದರ ನೂರಿತ್ತಾಯ ಹೃದಯಾಘಾತದಿಂದ ನಿಧನ

Suddi Udaya

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಗೆ ಹಲವು ಪ್ರಶಸ್ತಿ

Suddi Udaya

ದ.ಕ.ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರ ಜೊತೆ ರಕ್ಷಾ ಸಮಿತಿ ಸದಸ್ಯರಿಂದ ಸಮಿತಿ ಸಭೆ ಹಾಗೂ ರೋಗಿಗಳ ಭೇಟಿ

Suddi Udaya

ಲಾಯಿಲ ಕುಂಟಿನಿ ಭಾಗದಲ್ಲಿ ವೋಲ್ಟೇಜ್ ಸಮಸ್ಯೆ ಪರಿಹರಿಸಲು ಎಸ್‌ಡಿಪಿಐ ಮನವಿ

Suddi Udaya
error: Content is protected !!