ಬೆಳ್ತಂಗಡಿ ತಾಲೂಕಿನ ಅತ್ಯಂತ ಗ್ರಾಮೀಣ ಪ್ರದೇಶವಾದ ನೇಲ್ಯಡ್ಕದಲ್ಲಿರುವ ಸರಕಾರಿ ಪ್ರೌಢಶಾಲೆಗೆ ಬೆಳ್ತಂಗಡಿಯ ರೋಟರಿ ಆಯನ್ಸ್ ಕ್ಲಬ್ ವತಿಯಿಂದ ಪ್ರೌಢ ಶಾಲೆಗೆ ಅಗತ್ಯವಿದ್ದ ವಿಜ್ಞಾನ ಪ್ರಯೋಗಾಲಯ ಉಪಕರಣಗಳನ್ನು ಕೊಡುಗೆಯಾಗಿ ನೀಡಲಾಯಿತು.
ರೋಟರಿ ಆನ್ಸ್ ಕ್ಲಬ್‌ನ ಅಧ್ಯಕ್ಷೆ ಶ್ರೀಮತಿ ಗಾಯತ್ರಿ ಶ್ರೀಧರ್ ಮುತುವರ್ಜಿಯಿಂದ ಈ ಉಪಕರಣಗಳು ನೇಲ್ಯಡ್ಕ ಪ್ರೌಢಶಾಲೆಗೆ ಲಭಿಸಿದವು.
ಬೆಳ್ತಂಗಡಿಯ ರೊ. ಯಶವಂತ್ ಪಟವರ್ಧನ್ ಮತ್ತು ಶ್ರೀಮತಿ ರಶ್ಮಿ ಪಟವರ್ಧನ್ ದಂಪತಿ ಈ ಕೊಡುಗೆಯನ್ನು ಪ್ರಾಯೋಜಿಸಿದ್ದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಯಶವಂತ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಆಯನ್ಸ್ ಕ್ಲಬ್‌ನ ಅಧ್ಯಕ್ಷೆ ಶ್ರೀಮತಿ ಗಾಯತ್ರಿ ಶ್ರೀಧರ್, ಕಾರ್ಯದರ್ಶಿ ಡಾ. ವಿನಯಾ ಕಿಶೋರ್, ಶ್ರೀಮತಿ ರಶ್ಮಿ ಪಟವರ್ಧನ್, ಶ್ರೀಮತಿ ಹೇಮಾ ಮತ್ತು ಸಂಸ್ಥೆಯ ಮುಖ್ಯೋಪಾಧ್ಯಾಯ ರಾಜೇಂದ್ರ ಕೃಷ್ಣ ಹಾಗೂ ಎಲ್ಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉದಯ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಅರವಿಂದ ಗೋಖಲೆ ಸ್ವಾಗತಿಸಿ, ವಿಜಯ ಕುಮಾರ್ ವಂದಿಸಿದರು.