ಬೆಳ್ತಂಗಡಿ: ಲಾಯಿಲ ಗ್ರಾಮದ ಹಳೆಪೇಟೆ- ಕುತ್ರೋಟ್ಟು ಹೋಗುವ ರಸ್ತೆ, ಚರಂಡಿ, ಡಾಮರು ರಸ್ತೆ ಮಾಡಿಕೊಡುವಂತೆ ಕುಂಟಿನಿ ಕಾಂಗ್ರೆಸ್ ಬೂತ್ ಸಮಿತಿ ವತಿಯಿಂದ ಕೆಪಿಸಿಸಿ ಕಾರ್ಯದರ್ಶಿ ರಕ್ಶಿತ್ ಶಿವರಾಮ್ ರವರಿಗೆ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ರಕ್ಶಿತ್ ಶಿವರಾಮ್ ಸಂಬಂಧಪಟ್ಟ ಕಂಟ್ರಾಕ್ಟರ್, ಇಂಜಿನಿಯರ್, ಲೋಕೋಪಯೋಗಿ ಅಧಿಕಾರಿಗಳಿಗೆ ಕರೆ ಮಾಡಿ ಆದಷ್ಟು ಶೀಘ್ರವಾಗಿ ಕಾಮಗಾರಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಈ ಭರವಸೆಯಂತೆ ಫೆ.24ರಿಂದ ರಸ್ತೆ ಕಾಮಗಾರಿಯ ಕೆಲಸ ಪ್ರಾರಂಭವಾಗಿದ್ದು, ಈ ಕಾಮಗಾರಿ ನಡೆಯಲು ಪ್ರಮುಖ ಕಾರಣಕರ್ತರಾದ ರಕ್ಷಿತ್ ಶಿವರಾಮ್ ಅವರಿಗೆ ಕುಂಟಿನಿ ಕಾಂಗ್ರೆಸ್ ಬೂತ್ ಸಮಿತಿ ಹಾಗು ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾದ ಯು ಕೆ ಹನೀಫ್,ಯೂಥ್ ಕಾಂಗ್ರೆಸ್ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿಯಾದ ಅಬ್ದುಲ್ ರಹ್ಮಾನ್, ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಆದ ಮೊಹಮ್ಮದ್ ಕುಂಞಿ ಕತಾರ್, ಗ್ರಾಮ ಪಂಚಾಯತ್ ಸದಸ್ಯರಾದ ರೇವತಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಶರೀಫ್ ಕುಂಟಿನಿ ಹಾಗೂ ಇಂಜಿನಿಯರ್ ಆಗಿರುವ ಎಸ್ ಬಿ ಹಮೀದ್, ಉಮರ್ ಕುಂಞಿ ನಾಡ್ಜೆ,ಉಸ್ಮಾನ್, ಉಬೈದ್,ಹಮೀದ್ ಇಕ್ಬಾಲ್ ಝಮೀರ್ ಹಾಗು ಇನ್ನಿತರ ಕಾಂಗ್ರೆಸ್ನ ಕಾರ್ಯಕರ್ತರು ಹಾಗೂ ಊರಿನವರು ಉಪಸ್ಥಿತರಿದ್ದರು.