25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಸಮಾಲೋಚನಾ ಸಭೆ: ಅಧ್ಯಕ್ಷರಾಗಿ ಶಶಿಧರ ಶೆಟ್ಟಿ , ಸಂಚಾಲಕರಾಗಿ ಶಾಸಕ ಹರೀಶ್ ಪೂಂಜ

ತೆಕ್ಕಾರು: ಏಳುನೂರು ವರುಷಗಳ ಪುರಾತನವಾದ ದೇವಸ್ಥಾನ ಕಾರಣಾಂತರಗಳಿಂದ ಭೂಗರ್ಭದಲ್ಲಿ ಲೀನವಾಗಿ ಸಂಪೂರ್ಣ ಕುರುಹು ಇಲ್ಲವಾಗಿದ್ದ ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಮುತುವರ್ಜಿ ವಹಿಸಿ ಜಮೀನಿನ ದಾಖಲೆ ಪತ್ರ ಮಾಡಿಸಿಕೊಟ್ಟಿದ್ದರಿಂದ ಪುರಾತನ ದೇವಾಲಯ ಇದ್ದ ಜಮೀನು ವಶಕ್ಕೆ ಪಡೆಯಲಾಗಿ, ದಿನಾಂಕ 30.10.2023ರಂದು ಮಾಡವುವೆಂಕಟ್ರಮಣ ಭಟ್ ದೈವಜ್ಞರ ನಿರ್ದೇಶನದಂತೆ 05.11.2023.ಭೂಮಿಪೂಜೆ ವೈದಿಕ ವಿಧಿವಿಧಾನಗಳನ್ನ ನೆರವೇರಿಸಿ ಭೂ ಉತ್ಖನನ ಮಾಡಿದಾಗ ಬಾವಿ ಇದ್ದ ಜಾಗದಲ್ಲಿ 15ಅಡಿ ಆಳದಲ್ಲಿ ಭವ್ಯವಾದ ಶ್ರೀ ಗೋಪಾಲಕೃಷ್ಣ ದೇವರ ಭಿನ್ನವಾದ ದೇವರ ವಿಗ್ರಹ ಹಾಗೂ ಅವಶೇಷಗಳು ಪತ್ತೆಯಾಗಿ ಮಾಧ್ಯಮಗಳ ಮೂಲಕ ಜಗಜ್ಜಾಹೀರಾಗಿದೆ.


ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ‌ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ 22.04.23ರಂದು ಶಾಸಕರಾದ ಹರೀಶ್ ಪೂಂಜಾ ಭಾಗವಹಿಸಿ ಶಿಲಾನ್ಯಾಸ ಜರಗಿತು.13.11.2024ರಂದು ನೂತನವಾಗಿ ನಿರ್ಮಿಸಿದ ಗರ್ಭಗುಡಿಯ ಷಢಾದಾರ ಹಾಗೂ ಗರ್ಭನ್ಯಾಸ ವನ್ನು ನಡೆಸಲಾಗಿ ಇದೀಗ ಪುನರುತ್ಥಾನದ ಕಾರ್ಯ ಭರದಿಂದ ಸಾಗುತ್ತಿದೆ. ಊರ ಹಾಗೂ ನೆರೆಯ ಗ್ರಾಮದ ದಾನಿಗಳ ನೆರವಿನಿಂದ ಈಗಾಗಲೇ ಗರ್ಭಗುಡಿಯ ಕೆಲಸ ಸಂಪೂರ್ಣಗೊಂಡಿದ್ದು ಇದೀಗ ಸುತ್ತು ಪೌಳಿಯ ಕೆಲಸಸಾಗುತ್ತಿದ್ದು ಏಪ್ರಿಲ್ 30ರಂದು ವಿಜ್ರಂಭಣೆಯಿಂದ ಶ್ರೀ ಗೋಪಾಲಕೃಷ್ಣ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದೆಂದು ಬ್ರಹ್ಮಕಲಶೋತ್ಸವದ ಸಮಾಲೋಚನಾ ಸಭೆಯಲ್ಲಿ ನಿರ್ಧರಿಸಲಾಯಿತು.

ಹರೀಶ್ ಪೂಂಜಾ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಅಧ್ಯಕ್ಷರಾಗಿ ಶಶಿಧರ ಶೆಟ್ಟಿ ಬರೋಡ, ಗೌರವಾಧ್ಯಕ್ಷರಾಗಿ ಗಣೇಶ್ ರಾವ್ ಕರಾವಳಿ ಕಾಲೇಜು, ಸಂಸದರಾದ ಬ್ರಿಜೇಶ್ ಚೌಟ, ಯೋಗೀಂದ್ರ ಭಟ್ ಉಳಿ, ಕರುಣಾಕರ ಸುವರ್ಣ ಉಪ್ಪಿನಂಗಡಿ, ಸಂಚಾಲಕರಾಗಿ ಹರೀಶ್ ಪೂಂಜಾ, ಕಾರ್ಯಾಧ್ಯಕ್ಷರಾಗಿ ಲಕ್ಷ್ಮಣ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ರೈ, ಕೋಶಾಧಿಕಾರಿಯಾಗಿ ಅಣ್ಣು ಪೂಜಾರಿ ಹಾಗೂ ವಿವಿಧ ಉಪಸಮಿತಿಗಳಿಗೆ ಸಂಚಾಲಕರನ್ನು ಆಯ್ಕೆಗೊಳಿಸಲಾಯಿತು.


ಸಮಾಲೋಚನಾ ಸಭೆಯಲ್ಲಿ ಟ್ರಸ್ಟ್ ಅಧ್ಯಕ್ಷ ನಾಗಭೂಷಣ್ ರಾವ್, ತುಕಾರಾಂ ನಾಯಕ್, ಶಶಿಧರ ಶೆಟ್ಟಿ ಬರೋಡ, ಗಣೇಶ್ ರಾವ್, ಹರೀಶ್ ಪೂಂಜಾ, ಧ.ಗ್ರಾ.ಯೋಜನೆಯ ದಯಾನಂದ ಪೂಜಾರಿ, ನವೀನ್ ನೆರಿಯ ಉಪಸ್ಥಿತರಿದ್ದರು.
.

Related posts

ಕಕ್ಕಿಂಜೆ “ಅರ್ಶ್ ಎಜ್ಯುಕೇಶನ್ ಅಕಾಡೆಮಿ”ಯ ಪ್ರವೇಶಾತಿ ಆರಂಭ

Suddi Udaya

ಪಜಿರಡ್ಕ ಸಂಗಮ ಕ್ಷೇತ್ರ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಧ್ವಜಸ್ತಂಬ ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ ಹಾಗೂ ಪ್ರತಿಷ್ಠಾ ದಿನಾಚರಣೆ, ವಾರ್ಷಿಕ ಜಾತ್ರೆ ರಥೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳಾಲಿನಲ್ಲಿ ಅಕ್ರಮ ಮದ್ಯ ದಾಸ್ತಾನು ಘಟಕಕ್ಕೆ ಅಬಕಾರಿ ದಾಳಿ: ಆರೋಪಿ ದಯಾನಂದ ಸಹಿತ ರೂ.45 ಸಾವಿರ ಮೌಲ್ಯದ ಮದ್ಯ ವಶಕ್ಕೆ

Suddi Udaya

ಮಹಾಮಂಡಲೇಶ್ವರಾಗಿ ಪಟ್ಟಾಭಿಶಿಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ

Suddi Udaya

ತೆಕ್ಕಾರು: ಹೊಸಮೊಗ್ರು ಹೇಮಲತಾ ಕೊಂಡೆ ನಿಧನ

Suddi Udaya

ಉಜಿರೆ: ರುಡ್ ಸೆಟ್ ಸಮೀಪ ರಸ್ತೆಗೆ ಬಿದ್ದ ಮರ: ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ತೆರವು ಕಾರ್ಯ

Suddi Udaya
error: Content is protected !!