ಪಡಂಗಡಿ: ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಫೆ 26 ರoದು ಬೆಳಿಗ್ಗೆಯಿಂದ 27 ಬೆಳಗ್ಗಿನ ವರೇಗೆ ಆಹೋರಾತ್ರಿ ಜರಗುವ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಪ್ರಾರಂಭಗೊಂಡಿತು.

ದೇವಸ್ಥಾನದ ಪ್ರಧಾನ ಅರ್ಚಕ ಎಂ ರಘುರಾಮ್ ಭಟ್ ಮಠ ಚಾಲನೆ ನೀಡಿದರು. ಮಧ್ಯಾಹ್ನ ದೇವರಿಗೆ ಸಹಸ್ರ ಎಳನೀರು ಅಭಿಷೇಕ, ರುದ್ರಾಭಿಷೇಕ , ಮಹಾಪೂಜೆ, ಪ್ರಸಾದ ವಿತರಣೆ ಜರಗಿತು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಮೂಲ್ಯ ಕೊಂಡೆಮಾರ್ ಮತ್ತು ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.