ಬೆಳ್ತಂಗಡಿ : ರತ್ನಾವತಿ ಪಿ ರವರು ಬೆಳ್ತಂಗಡಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಸುಮಾರು 20ವರ್ಷ ಕಾಲ ಬಂದಾರು ಅಂಗನವಾಡಿ ಕೇಂದ್ರದಲ್ಲಿ ಹಾಗೂ ನಡ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ, ನಂತರ 16ವರ್ಷ ಮೇಲ್ವಿಚಾರಕಿಯಾಗಿ ಹಾಗೂ 2020 ರಿಂದ ಹಿರಿಯ ಮೇಲ್ವಿಚಾರಕಿಯಾಗಿ ಹಾಗೂ ವಿಕಲಚೇತನ ಹಾಗೂ ಹಿರಿಯ ನಾಗರೀಕರ ತಾಲೂಕು ನೋಡಲ್ ಅಧಿಕಾರಿಯಾಗಿ, ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ಹಾಗೂ ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿ ಫೆ.28ರಂದು ನಿವೃತ್ತರಾಗಲಿದ್ದಾರೆ.