ತೆಂಕಕಾರಂದೂರು: ಗುಂಡೇರಿ ಲಯನ್ಸ್ ಬಸ್ ತಂಗುದಾನದಲ್ಲಿದ್ದ ಶ್ರೀ ಕೃಷ್ಣನ ಮೂರ್ತಿಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷರ ನೇತೃತ್ವದಲ್ಲಿ ಪವಿತ್ರ ಪಲ್ಗುಣಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅನಂತ ಭಟ್ ಕೆಳ್ಕರ, ಬಾಲಕೃಷ್ಣ ಶೆಟ್ಟಿ ನೇಸರ, ವಸಂತ ಶೆಟ್ಟಿ ಉಪಸ್ಥಿತರಿದ್ದರು.
ರಾಜ್ಯ ಹೆದ್ದಾರಿ ರಸ್ತೆಯ ಗುಂಡೇರಿ ಪರಿಸರದಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಲಯನ್ಸ್ ತಂಗುದಾನದಲ್ಲಿ ಭಗವಾನ್ ಶ್ರೀ ಕೃಷ್ಣನ ಮೂರ್ತಿಯನ್ನು ಯಾರೋ ಇಟ್ಟು ಹೋದ ಘಟನೆ ಬೆಳಕಿಗೆ ಬಂದಿದ್ದು, ಸುದ್ದಿ ಉದಯ ನ್ಯೂಸ್ ನಲ್ಲಿ ವಿಷಯ ಪ್ರಸಾರವಾಗುತ್ತಿದ್ದಂತೆ ಸ್ಥಳೀಯರು ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಶೆಟ್ಟಿ ಹಿಬರೋಡಿರವರು ಸ್ಥಳಕ್ಕೆ ತೆರಳಿ ಪುರೋಹಿತರ ಸಹಕಾರದೊಂದಿಗೆ ವಿಸರ್ಜನೆ ಮಾಡಿದರು.