21.6 C
ಪುತ್ತೂರು, ಬೆಳ್ತಂಗಡಿ
March 1, 2025
Uncategorized

ಪಾಡ್ದನ,ಸಂಧೀ ಮುಂತಾದ ಅನೇಕ ಜನಪದೀಯ ಸಾಂಸ್ಕೃತಿಕ ಬೇರುಗಳು ಮುಂದಿನ ತಲೆಮಾರಿಗೆ ತಿಳಿಸುವ ನಿಟ್ಟಿನಲ್ಲಿ ಹೆಗ್ಗೋಡಿನ ನೀನಾಸಂ ,ರಂಗಾಯಣದಂತಹ ರಂಗ ಶಾಲೆ ತೆರೆಯುವ ಯೋಚನೆ: ಸಂಪತ್ ಬಿ ಸುವರ್ಣ

ಬೆಳ್ತಂಗಡಿ:ಅಭಿವೃದ್ಧಿ ಎಂದರೆ ಬರೀ ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ ಅಲ್ಲ.ವ್ಯಕ್ತಿಯೋರ್ವನ ಸಾಂಸ್ಕೃತಿಕ ಮನಸ್ಸು ಕಟ್ಟುವ ಕೆಲಸವು ಕೂಡ ಆಂತರಿಕ ಅಭಿವೃದ್ಧಿಯೇ. ಯುವ ಮನಸ್ಸುಗಳನ್ನು ಸಾಂಸ್ಕೃತಿಕವಾಗಿ ಕಟ್ಟದೆ ಹೋದಲ್ಲಿ ಭಾರತದ ನೈಜ ಸಾಂಸ್ಕೃತಿಕ ವಿಶ್ವರೂಪ ದರ್ಶನ ದೊರೆಯದ ಸಾಧ್ಯವಿಲ್ಲ. ಭಾರತೀಯ ಕಲಾ ಪ್ರಕಾರಗಳೆಲ್ಲವು ಸಾಮಾಜಿಕ ಮೌಲ್ಯಗಳ ಅಂತ್ಹಸತ್ವ ಅಧರಿಸಿದವುಗಳು. ಭಾರತೀಯ ಸಂಸ್ಕೃತಿಯ ನಾಟಕ ,ಯಕ್ಷಗಾನ, ಸಂಗೀತಗಳು ಮನೋರಂಜನಾ ಕಾರ್ಯಕ್ರಮಗಳಲ್ಲ. ಅದು ಕಲೆ ಸಂಸ್ಕೃತಿ, ಸಂಸ್ಕಾರ , ಆಚರಣೆ, ಆಚಾರ ವಿಚಾರಗಳ ಮನೋವಿಕಾಸದ ಒಟ್ಟು ಸಂಕಲನ.

ಈ ನೆಲದ ಮಣ್ಣಿನ ಜೀವಂತಿಕೆಯನ್ನು ,ಅದರ ಸಾರವನ್ನು,ಈ ದೇಶ ಪ್ರತಿಪಾದಿಸಿದ ಜೀವನ ಮೌಲ್ಯವನ್ನು ತಿಳಿಸುವ ಪ್ರಯತ್ನವೆ ಸಾಂಸ್ಕೃತಿಕ ಪ್ರತಿಷ್ಠಾನದ ಉದ್ದೇಶ ಆಗಿದೆ. ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಕಳೆದ 15 ವರ್ಷಗಳಿಂದ ಇದೇ ವಿಚಾರದಲ್ಲಿ ನಂಬಿಕೆಯಿಟ್ಟು ಬೆಳೆದಿದೆ. ಪಾಡ್ದನ, ಸಂಧೀ ಮುಂತಾದ ಅನೇಕ ಜನಪದೀಯ ಸಾಂಸ್ಕೃತಿಕ ಬೇರುಗಳು ಮುಂದಿನ ತಲೆಮಾರಿಗೆ ತಿಳಿಸುವ ನಿಟ್ಟಿನಲ್ಲಿ ಹೆಗ್ಗೋಡಿನ ನೀನಾಸಂ ,ಮೈಸೂರಿನ ರಂಗಾಯಣದಂತಹ ರಂಗ ಶಾಲೆಗಳನ್ನು ತೆರೆಯುವ ಆಲೋಚನೆಗಳಿವೆ ಎಂದು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ತಿಳಿಸಿದರು. ಮಾಹಿತಿಗಾಗಿ ಅವರ ಪೋನ್ ನಂಬರ್ – 96633 73940

Related posts

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ವಲಯ ಮಟ್ಟದ ಕ್ರೀಡಾಕೂಟದ ಸಮಾರೋಪ ಸಮಾರಂಭ

Suddi Udaya

ಪದ್ಮುಂಜ: ಸ. ಹಿ. ಪ್ರಾ. ಶಾಲಾಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷರಾಗಿ ಪುರುಷೋತ್ತಮ ಗೌಡ ಆಯ್ಕೆ

Suddi Udaya

ಕಲ್ಮಂಜ: ನಿಡಿಗಲ್ ನಿವಾಸಿ ಗೋಪಾಲ ಮಡಿವಾಳ ಹೃದಯಾಘಾತದಿಂದ ನಿಧನ

Suddi Udaya

ಯಕ್ಷ ಸಂಭ್ರಮ- 2024 ಇದರ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮಣ್ಣಿನ ಹರಕೆ ಖ್ಯಾತಿಯ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನ: ಅಂಗನವಾಡಿಗಳ 159 ಮಕ್ಕಳಿಗೆ ಮತ್ತು 87 ಮಂದಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿ ಗಳಿಗೆ ಪ್ರೋತ್ಸಾಹಧನ ವಿಚಾರಣೆ

Suddi Udaya
error: Content is protected !!