35.9 C
ಪುತ್ತೂರು, ಬೆಳ್ತಂಗಡಿ
February 28, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ-ಪೆರಿಯಶಾಂತಿ ಹೆದ್ದಾರಿ ಅಭಿವೃದ್ಧಿ ಖಾಸಗಿ ಜಾಗದ ಮರಗಳ ಸಮೀಕ್ಷೆ

ಸ್ಪರ್ ರಸ್ತೆಯಾಗಿ ಮೇಲ್ದರ್ಜೆಗೆ ಏರಿದ್ದು ಅಭಿವೃದ್ಧಿ ಹೊಂದಲಿರುವ ಉಜಿರೆ- ಪೆರಿಯಶಾಂತಿ ನಡುವಿನ ರಸ್ತೆಯ ನಿರ್ಮಾಣಕ್ಕೆ ಕೇಂದ್ರ ಸರಕಾರ ಅನುದಾನ ಮೀಸಲಿರಿಸಿದ್ದು ಇದರ ಒಂದೊಂದೇ ಹಂತದ ಸಮೀಕ್ಷೆಗಳು ನಡೆಯುತ್ತಿದ್ದು, ಉಜಿರೆಯಿಂದ ಧರ್ಮಸ್ಥಳ ತನಕ ರಸ್ತೆ ಅಭಿವೃದ್ಧಿಗೆ ತೆರವುಗೊಳ್ಳಲಿರುವ ಖಾಸಗಿ ಜಾಗಗಳಲ್ಲಿರುವ ಮರಗಳ ಸಮೀಕ್ಷೆ ನಡೆಯುತ್ತಿದೆ.
ಕೆಲವೆಡೆ ಚತುಷ್ಪಥ, ಕೆಲವೆಡೆ ದ್ವಿಪಥವಾಗಿ ನಿರ್ಮಾಣಗೊಳ್ಳಲಿರುವ ಈ ರಸ್ತೆಯ ಅಭಿವೃದ್ಧಿ ವೇಳೆ ಹಲವು ಮರಗಳು ತೆರವುಗೊಳ್ಳಬೇಕಿದೆ. ಇದರ ಪ್ರಥಮ ಅಂಗವಾಗಿ ಖಾಸಗಿ ಜಾಗದಲ್ಲಿರುವ ಮರಗಳನ್ನು ಗುರುತಿಸಲಾಗುತ್ತಿದೆ. ತೆರವುಗೊಳ್ಳುವ ಪ್ರತಿ ಮರಕ್ಕೆ ಮೌಲ್ಯ ನಿಗದಿಪಡಿಸಿ‌ಕಟಾವಿನ ವೇಳೆ ಸ್ಥಳದ ಮಾಲೀಕರಿಗೆ ನೀಡಲಾಗುತ್ತದೆ.

ಸಮೀಕ್ಷೆ ಕಾರ್ಯದಲ್ಲಿ ಭೂಸ್ವಾಧೀನ ಅಧಿಕಾರಿ ಕಚೇರಿಯ ಆರ್ ಐ ನವೀನ್ ಕುಮಾರ್, ಸರ್ವೆಯರ್ ಕೃಷ್ಣಪ್ರಸಾದ್,ಬೆಳ್ತಂಗಡಿ ಅರಣ್ಯ ವಲಯದ ಡಿಆರ್ ಎಫ್ ಒ ರವಿಚಂದ್ರ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Related posts

ಉಜಿರೆ ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ

Suddi Udaya

ನೀರಿನ ಮಟ್ಟ ಹಾಗೂ ಭೂ ಕುಸಿತದ ಲಕ್ಷಣ ಕಂಡರೆ ಕೂಡಲೇ ಸಂಪರ್ಕಿಸುವಂತೆ ಶಾಸಕ ಹರೀಶ್ ಪೂಂಜ ಮನವಿ

Suddi Udaya

ಬೆಳ್ತಂಗಡಿ ಬೊಟ್ಟುಗುಡ್ಡೆ ನಿವಾಸಿ ಶ್ರೀಮತಿ ಕಮಲ ಸಫಲ್ಯ ನಿಧನ

Suddi Udaya

ಮುಂಡಾಜೆ ಚಿತ್ಪಾವನ ಸಂಘಟನೆಯ ವಾರ್ಷಿಕೋತ್ಸವ: ಪದಗ್ರಹಣ ಸಮಾರಂಭ

Suddi Udaya

ಕೊಕ್ರಾಡಿ: ದೇವೆಂದ್ರ ಹೆಗ್ಡೆಯವರ ಮಾತೃಶ್ರೀ ಕೊಡಂಗೆಗುತ್ತು ನೀಲಮ್ಮ ಹೆಗ್ಡೆ ನಿಧನ

Suddi Udaya

ಧರ್ಮಸ್ಥಳ ಗ್ರಾ.ಪಂ. ಮಾಜಿ ಸದಸ್ಯ ಗೋಪಾಲ ಪೂಜಾರಿ ನಿಧನ

Suddi Udaya
error: Content is protected !!