25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ-ಪೆರಿಯಶಾಂತಿ ಹೆದ್ದಾರಿ ಅಭಿವೃದ್ಧಿ ಖಾಸಗಿ ಜಾಗದ ಮರಗಳ ಸಮೀಕ್ಷೆ

ಸ್ಪರ್ ರಸ್ತೆಯಾಗಿ ಮೇಲ್ದರ್ಜೆಗೆ ಏರಿದ್ದು ಅಭಿವೃದ್ಧಿ ಹೊಂದಲಿರುವ ಉಜಿರೆ- ಪೆರಿಯಶಾಂತಿ ನಡುವಿನ ರಸ್ತೆಯ ನಿರ್ಮಾಣಕ್ಕೆ ಕೇಂದ್ರ ಸರಕಾರ ಅನುದಾನ ಮೀಸಲಿರಿಸಿದ್ದು ಇದರ ಒಂದೊಂದೇ ಹಂತದ ಸಮೀಕ್ಷೆಗಳು ನಡೆಯುತ್ತಿದ್ದು, ಉಜಿರೆಯಿಂದ ಧರ್ಮಸ್ಥಳ ತನಕ ರಸ್ತೆ ಅಭಿವೃದ್ಧಿಗೆ ತೆರವುಗೊಳ್ಳಲಿರುವ ಖಾಸಗಿ ಜಾಗಗಳಲ್ಲಿರುವ ಮರಗಳ ಸಮೀಕ್ಷೆ ನಡೆಯುತ್ತಿದೆ.
ಕೆಲವೆಡೆ ಚತುಷ್ಪಥ, ಕೆಲವೆಡೆ ದ್ವಿಪಥವಾಗಿ ನಿರ್ಮಾಣಗೊಳ್ಳಲಿರುವ ಈ ರಸ್ತೆಯ ಅಭಿವೃದ್ಧಿ ವೇಳೆ ಹಲವು ಮರಗಳು ತೆರವುಗೊಳ್ಳಬೇಕಿದೆ. ಇದರ ಪ್ರಥಮ ಅಂಗವಾಗಿ ಖಾಸಗಿ ಜಾಗದಲ್ಲಿರುವ ಮರಗಳನ್ನು ಗುರುತಿಸಲಾಗುತ್ತಿದೆ. ತೆರವುಗೊಳ್ಳುವ ಪ್ರತಿ ಮರಕ್ಕೆ ಮೌಲ್ಯ ನಿಗದಿಪಡಿಸಿ‌ಕಟಾವಿನ ವೇಳೆ ಸ್ಥಳದ ಮಾಲೀಕರಿಗೆ ನೀಡಲಾಗುತ್ತದೆ.

ಸಮೀಕ್ಷೆ ಕಾರ್ಯದಲ್ಲಿ ಭೂಸ್ವಾಧೀನ ಅಧಿಕಾರಿ ಕಚೇರಿಯ ಆರ್ ಐ ನವೀನ್ ಕುಮಾರ್, ಸರ್ವೆಯರ್ ಕೃಷ್ಣಪ್ರಸಾದ್,ಬೆಳ್ತಂಗಡಿ ಅರಣ್ಯ ವಲಯದ ಡಿಆರ್ ಎಫ್ ಒ ರವಿಚಂದ್ರ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Related posts

ತಣ್ಣೀರುಪಂತ: ನವಚೇತನಾ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನೂತನ ಕಟ್ಟಡದ ಉದ್ಘಾಟನೆ

Suddi Udaya

ಕುವೆಟ್ಟು ಸ. ಉ. ಹಿ. ಪ್ರಾ. ಶಾಲೆಯಲ್ಲಿ ಮೆಟ್ರಿಕ್ ಮೇಳ

Suddi Udaya

ಗುರುವಾಯನಕೆರೆ ವಿದ್ವತ್ ಪ.ಪೂ. ಕಾಲೇಜಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ.ಶಾಲೆಯಲ್ಲಿ ಮಕ್ಕಳ ದಿನಾಚರಣೆ: ಹೆತ್ತವರ ಪೋಷಕರ/ಮಹಾಸಭೆ

Suddi Udaya

ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ವತಿಯಿಂದ ಬೆಳ್ತಂಗಡಿ ತಾಲೂಕಿನ ವಿವಿಧ ಇಲಾಖೆಯ ಒವರಂ ಕ್ರಿಕೆಟ್ ಪಂದ್ಯಾಟ “ರಾಜಕೇಸರಿ ರತ್ನ ಟ್ರೋಫಿ”

Suddi Udaya

ಪಟ್ರಮೆ ಗ್ರಾ.ಪಂ. ಮಟ್ಟದ ಸ್ಪಂದನ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya
error: Content is protected !!