ಇಂದಬೆಟ್ಟು : ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದಬೆಟ್ಟು ನವೀಕೃತ ಕೊಠಡಿಯ ಉದ್ಘಾಟನಾ ಸಮಾರಂಭವು ಮಾ. 1ರಂದು ನೆರವೇರಿತು.

ಈ ಸಮಾರಂಭದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಯುತ ಹರೀಶ್ ಪೂಂಜ ಇವರು ನವೀಕೃತ ಕೊಠಡಿಯನ್ನು ಉದ್ಘಾಟನೆ ಮಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ವಿಧಾನ ಪರಿಷತ್ ಶಾಸಕರಾದ ಶ್ರೀಯುತ ಪ್ರತಾಪ್ ಸಿಂಹ ನಾಯಕ್ ಇವರು ಮಾತನಾಡಿ ಶಾಲಾ ಕೊಠಡಿಗಳನ್ನು ಬಣ್ಣದ ರಂಗಿನಿಂದ ವರ್ಣ ರಂಜಿತಗೊಳಿಸಿ ಮುದ್ದು ಮಕ್ಕಳ ಮತ್ತು ಊರಿನ ಜನತೆಯ ಮುಖದಲ್ಲಿ ಮಂದಹಾಸ ಮೂಡಿಸಿದಂತಹ ಲಯನ್ಸ್ ಕ್ಲಬ್ ನ ಅಧ್ಯಕ್ಷರನ್ನು ಅಭಿನಂದಿಸಿದರು

. ಹಾಗೂ ಎಲ್ಲಾ ಊರಿನ ಜನರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಸೇರಿಸಬೇಕೆಂಬ ಕಿವಿ ಮಾತನ್ನು ಕೂಡ ನೀಡಿದರು. ಮತ್ತೋರ್ವ ಅತಿಥಿಯಾಗಿ ಆಗಮಿಸಿದಂತಹ ಬದುಕು ಕಟ್ಟೋಣ ತಂಡದ ಸಂಚಾಲಕರಾದಂತಹ ಮೋಹನ್ ಕುಮಾರ್ ಇವರು ನಮ್ಮ ಮನಸ್ಸಿನಲ್ಲಿ ಸರಕಾರಿ ಶಾಲೆಗಳು ಹೀಗೆ ಇರಬೇಕೆಂಬ ಒಂದು ನಿರೀಕ್ಷೆ ಇದೆ.ಈ ನಿರೀಕ್ಷೆಗೆ ಅನುಗುಣವಾಗಿ ಲಯನ್ಸ್ ಕ್ಲಬ್ ಬೆಳ್ತಂಗಡಿ ಈ ಸರಕಾರಿ ಶಾಲೆಯನ್ನು ವರ್ಣ ರಂಜಿತ ಗೊಳಿಸಿದೆ. ಎಂದು ತಿಳಿಸಿದರು. ಲಯನ್ಸ್ ಅಧ್ಯಕ್ಷರಾದಂತಹ ದೇವದಾಸ್ ಶೆಟ್ಟಿ ಇವರು ಬಂದಂತಹ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿದರು. ಶಾಲೆಯ ಮುಖ್ಯ ಶಿಕ್ಷಕಿಯಾದಂತಹ ದೀಪಾ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಲಯನ್ ಕಿರಣ್ ಕುಮಾರ್ ಶೆಟ್ಟಿ ಮಾತನಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಸಕರಾದ ಹರೀಶ್ ಪೂಂಜ, ವಿಧಾನ ಪರಿಷತ್
ಶಾಸಕರಾದಂತಹ ಪ್ರತಾಪ್ ಸಿಂಹ ನಾಯಕ,ಲಯನ್ ದೇವದಾಸ್ ಶೆಟ್ಟಿ ಹಾಗೂ ಚಿತ್ರ ಕಲಾವಿದ ಧನುಷ್ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆಶಾಲತಾ ಗುಡಿಗಾರ್ ಗ್ರಾಮ ಪಂಚಾಯತ್, ಸದಸ್ಯರಾದ ಆನಂದ ಅಡಿಲು, ಎಸ್ಡಿಎಂಸಿ ಅಧ್ಯಕ್ಷರಾದ ಆನಂದ ಕೊಪ್ಪದ ಕೋಡಿ ಹಾಗೂ ಲಯನ್ ಅಶೋಕ್ ಬಿ.ಪಿ ಉಪಸ್ಥಿತರಿದ್ದರು. ಅತಿಥಿ ಶಿಕ್ಷಕಿ ಸುಜಾತ ಧನ್ಯವಾದ ವಿತ್ತರು.ಪ್ರಾಥಮಿಕ ಪದವೀಧರ ಶಿಕ್ಷಕಿ ಮೇಘ ಎಮ್.ಕೆ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು.