ಉಜಿರೆ : ಉಜಿರೆ ಅನುಗ್ರಹ ಪಿ ಯು ಕಾಲೇಜಿನಲ್ಲಿ ಮಾರ್ಚ್ 03ರಂದು ತಡರಾತ್ರಿ ಕಳ್ಳತನ ನಡೆದ ಘಟನೆ ನಡೆದಿದೆ.

ಕಾಲೇಜಿನ ಕಚೇರಿಗೆ ನುಗ್ಗಿದ ಕಳ್ಳರು, ಹಣಕ್ಕಾಗಿ ಹುಡುಕಾಟ ನಡೆಸಿದ್ದು ಹಣ ಸಿಗದ ಹಿನ್ನೆಲೆ, ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿ , ಕೊನೆಗೆ ಸಿಸಿ ಕ್ಯಾಮೆರಾ ಎನ್ ವಿಆರ್, ಹಾರ್ಡ್ ಡಿಸ್ಕ್ ಕದ್ದೊಯ್ದಿದ್ದಾರೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಶ್ವಾನದಳವನ್ನು ಕರೆಸಿ ಪರಿಶೀಲನೆ ನಡೆಸಲಾಗಿದೆ. ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ.