ಬೆಳ್ತಂಗಡಿ: ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ ಅಗಲೀಕರಣ ಪ್ರಯುಕ್ತ ವಿದ್ಯುತ್ ಕಂಬಗಳ ಸ್ಥಳಾಂತರ ಮಾಡುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಬೆಳ್ತಂಗಡಿ ಪೇಟೆ, ಕುತ್ಯಾರು, ಲಾಯಿಲ, ಸಂತೆಕಟ್ಟೆ, ಜ್ಯೂನಿಯರ್ ಕಾಲೇಜು ರಸ್ತೆ, ಕೊಯ್ಯೂರು ಕ್ರಾಸ್, ಪಡ್ಡಾಡಿ, ಮಂಜೊಟ್ಟಿ, ನಾವೂರು, ಕೇಳ್ತಾಜೆ, ಹಳೆಕೋಟೆ, ಮೇಲಂತಬೆಟ್ಟು, ವಾಣಿ ಶಾಲೆ, ಜೈನಬಸದಿ, ಚರ್ಚ್ ರಸ್ತೆ, ಕಲ್ಲಗುಡ್ಡೆ, ಚೌಕದಬೆಟ್ಟು, ಹುಣ್ಸೆಕಟ್ಟೆ, ರೆಂಕೆದಗುತ್ತು, ಶಾಂತಿನಗರ, ಪುದ್ದೊಟ್ಟು, ಮುಗುಳಿ ಪರಿಸರದಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 5.30ರ ತನಕ ವಿದ್ಯುತ್ ನಿಲುಗಡೆ ಹಾಗೂ
ಬೆಳ್ತಂಗಡಿ ಉಪವಿಭಾಗದ ಕಲ್ಲೇರಿ ಶಾಖಾ ವ್ಯಾಪ್ತಿಯ ಹೊಸ 11 ಕೆವಿ ಅಂಡೆತಡ್ಕ ಫೀಡರನ್ನು ಚಾಲನೆಗೊಳಿಸುವ ಸಲುವಾಗಿ ಕರಾಯ ೧೧೦/೩೩/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದಿAದ ಹೊರಡುವ 11 ಕೆವಿ ಕಲ್ಲೇರಿ ಟೌನ್, ಉಪ್ಪಿನಂಗಡಿ ಟೌನ್, ಕೆಮ್ಮಾರ, ಪದ್ಮುಂಜ ಹಾಗೂ ಮುಗೇರಡ್ಕ ಫೀಡರುಗಳಲ್ಲಿ ಬೆಳಿಗ್ಗೆ 10.00ರಿಂದ ಮಧ್ಯಾಹ್ನ 2.00 ರ ತನಕ ಮಾ.6 ರಂದು ವಿದ್ಯುತ್ ನಿಲುಗಡೆಯಾಗಲಿದೆ.