April 28, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಛಂದಸ್ಸು: ಪರಿಚಯಾತ್ಮಕ ಕಾರ್ಯಗಾರ

ಪಟ್ಟೂರು: ಕನ್ನಡ ಭಾಷೆಯಲ್ಲಿ ಪದ್ಯಗಳನ್ನು ರಚಿಸುವಾಗ ಅದರದೇ ಆದ ಕೆಲವು ನಿಯಮಗಳಿದ್ದು, ಪದ್ಯದ ರಚನಾ ನಿಯಮಗಳನ್ನು ತಿಳಿಸುವ ಶಾಸ್ತ್ರ ಛಂದಸ್ಸಾಗಿದೆ. ವಿದ್ಯಾರ್ಥಿಗಳು ಪದ್ಯವನ್ನು ರಚಿಸುವಾಗ ಛಂದಸ್ಸಿನಲ್ಲಿ ಬರುವಂತಹ ಪ್ರಾಸಗಳು, ಗಣಗಳು ಸೇರಿದಂತೆ ಇತರ ವಿಚಾರಗಳನ್ನು ಅಳವಡಿಸಿಕೊಂಡಾಗ ಅಂತಹ ಪದ್ಯಗಳು ವಿಶೇಷ ಮಹತ್ವವನ್ನು ಪಡೆಯುತ್ತವೆ ಎಂದು ಪಟ್ಟೂರಿನ ಶ್ರೀರಾಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಚಂದ್ರಶೇಖರ ಶೇಟ್ ನುಡಿದರು.


ಪಟ್ರಮೆ ಗ್ರಾಮದ ಪಟ್ಟೂರಿನ ಶ್ರೀರಾಮ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಛಂದಸ್ಸು: ಪರಿಚಯಾತ್ಮಕ ವಿವರ ಎಂಬ ಎಂಬ ವಿಷಯದ ಕುರಿತು ನಡೆದ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದರು.
ಭಿನ್ನ ತರಗತಿಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಕಾರ್ಯಗಾರಗಳ ಮೂಲಕ ಬೋಧಿಸಿದರೆ ಮಕ್ಕಳು ಅದನ್ನು ಬೇಗನೆ ಕಲಿತುಕೊಳ್ಳುತ್ತಾರೆ ಎಂದರು.


ಕನ್ನಡ ವಿಭಾಗದ ಶಿಕ್ಷಕಿ ಸುಪ್ರೀತಾ ಎ. ಮತ್ತು ಸ್ವಾತಿ ಕೆ.ವಿ. ವಿದ್ಯಾರ್ಥಿಗಳಿಗೆ ಛಂದಸ್ಸು, ಮಾತ್ರಗಣ ಹಾಗೂ ಕಂದ ಪದ್ಯಗಳ ಬಗ್ಗೆ ಚಟುವಟಿಕೆ ಮೂಲಕ ಕಾರ್ಯಗಾರವನ್ನು ನಡೆಸಿಕೊಟ್ಟರು.
ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ಪಾಲ್ಗೊಂಡರು.

Related posts

ಪಡುಬಿದ್ರೆಯಲ್ಲಿ ಭೀಕರ ರಸ್ತೆ ಅಪಘಾತ: ಅರಸಿನಮಕ್ಕಿ ಪುರುಷೋತ್ತಮ್ ಅಭ್ಯಂಕರ್ ರವರ ಪತ್ನಿ ಶ್ರೀಮತಿ ಸುಮಂಗಳ ಮೃತ್ಯು

Suddi Udaya

ದ್ವಿಚಕ್ರ ವಾಹನಗಳ ನಡುವೆ ಅಪಘಾತ: ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಆನ್ ಲೈನ್ ಜಾಬ್ ಆಫರ್ ನೀಡಿ ಮಹಿಳೆಗೆ ರೂ. 4.25 ಲಕ್ಷ ವಂಚನೆ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಅರಸಿನಮಕ್ಕಿ ಸ. ಪ್ರೌ. ಶಾಲೆಯಲ್ಲಿ ಸ್ವಾತಂತ್ಯೋತ್ಸವ ದಿನಾಚರಣೆ ಪ್ರಯುಕ್ತ ಪ್ರತಿಭಾ ಪುರಸ್ಕಾರ – ಸನ್ಮಾನ ಕಾರ್ಯಕ್ರಮ

Suddi Udaya

ಅಕ್ರಮ ಇಸ್ಪೀಟ್ ಅಡ್ಡೆಗೆ ಪೊಲೀಸ್ ದಾಳಿ : ರೂ. 54 ಸಾವಿರ ನಗದು ಸಹಿತ 37 ಮಂದಿ ವಶ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಬಕ್ರೀದ್ ಹಬ್ಬ ಆಚರಣೆ

Suddi Udaya
error: Content is protected !!