
ಕೊಕ್ಕಡ: ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪಿ. ಕುಶಾಲಪ್ಪ ಗೌಡ ಹಾಗೂ ಉಪಾಧ್ಯಕ್ಷರಾಗಿ ಮಹಾಬಲ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.


ನಿದೇರ್ಶಕರಾಗಿ ವಿಠಲ ಭಂಡಾರಿ, ಶ್ರೀನಾಥ ಬಿ., ಪದ್ಮನಾಭ ಕೆ., ಉದಯ ಎ., ಸುನಿಲ್, ರವಿಚಂದ್ರ ಪಿ., ಶ್ರೀಮತಿ ಪ್ರೇಮಾವತಿ, ಶ್ರೀಮತಿ ಅಶ್ವಿನಿ, ವಿಶ್ವನಾಥ, ಮುತ್ತಪ್ಪ ಆಯ್ಕೆಯಾಗಿದ್ದಾರೆ,


ಚುನಾವಣಾಧಿಕಾರಿಯಾಗಿ ಎನ್.ಜೆ. ಗೋಪಾಲ್ ಕರ್ತವ್ಯ ನಿರ್ವಹಿಸಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ನವೀನ್ ಕೆ, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಸಿರಾಜಾದ್ದೀನ್, ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.