May 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಚ್ಛತಾ ಆಂದೋಲನ ಶಿಬಿರ

ಬೆಳ್ತಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾ ವೇದಿಕೆ, ಯುವ ರೆಡ್ ಕ್ರಾಸ್ ಘಟಕ ಮತ್ತು ರೋವರ್ಸ್ ರೆಂಜರ್ಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛತಾ ಆಂದೋಲನ ಶಿಬಿರವನ್ನು ಕಾಲೇಜಿನಲ್ಲಿ ನಡೆಸಲಾಯಿತು.

ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊಫೆಸರ್ ಪದ್ಮನಾಭ ಕೆ ಇವರು ಸ್ವಚ್ಛತಾ ಶಿಬಿರವನ್ನು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಸುರೇಶ್ ವಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿ ಹಾಗೂ ರೋವರ್ ಸ್ಕೌಟ್ ಲೀಡರ್ ಡಾ. ರವಿ ಎಂ ಎನ್. ಶಿಬಿರದ ಸಂಯೋಜನೆಯನ್ನು ಮಾಡಿದರು. ಕಾಲೇಜಿನ ಐಕ್ಯೂ ಎಸಿ ಘಟಕದ ಸಂಚಾಲಕರಾದ ಡಾ. ಕುಶಲಪ್ಪ ಎಸ್ ಶ್ರಮದಾನಕ್ಕೆ ಚಾಲನೆ ನೀಡಿದರು. ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಈ ಶಿಬಿರದಲ್ಲಿ ಶ್ರಮದಾನಕ್ಕೆ ಕೈ ಜೋಡಿಸಿದರು. ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಅಡುಗೆ ಮಾಡಿ ಮಧ್ಯಾಹ್ನದ ಊಟವನ್ನು ನೀಡಲಾಯಿತು.

Related posts

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವದ ಬೆಳ್ಳಿಹಬ್ಬ ಮಹೋತ್ಸವ:ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಆ.9: ವೇಣೂರಿನಲ್ಲಿ ವಿದ್ಯುತ್ ನಿಲುಗಡೆ

Suddi Udaya

ಡಿ.2 : ಕಾಪಿನಡ್ಕದಲ್ಲಿ 65 ಕೆಜಿ ವಿಭಾಗದ ಪುರುಷರ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ: ಸ.ಕಿ.ಪ್ರಾ.ಶಾಲೆ ಮತ್ತು ಗೆಳೆಯರ ಬಳಗ ಕಾಪಿನಡ್ಕ ಇದರ 25 ನೇ ವರ್ಷದ ರಜತ ಮಹೋತ್ಸವ ಸಂಭ್ರಮ

Suddi Udaya

ಸಾವ್ಯ ಬಿಜೆಪಿ ಯುವಮೊರ್ಚಾ ಅಧ್ಯಕ್ಷರಾಗಿ ಸ್ವಸ್ತಿಕ್ ಪೂಜಾರಿ, ಕಾರ್ಯದರ್ಶಿಯಾಗಿ ಪ್ರಶಾಂತ್ ಪೂಜಾರಿ ಆಯ್ಕೆ

Suddi Udaya

ಬೆಳ್ತಂಗಡಿ: ಉಪನ್ಯಾಸಕ ಪುನೀತ್ ಕುಮಾರ್ ಬಯಲು ಅವರಿಗೆ ನುಡಿನಮನ ಕಾರ್ಯಕ್ರಮ

Suddi Udaya

ಆರಂಬೋಡಿ ಬಂಟ್ಸ್ ಸಂಘದ ಗ್ರಾಮ ಸಮಿತಿ ಸಭೆ

Suddi Udaya
error: Content is protected !!