
ಪುಂಜಾಲಕಟ್ಟೆ: ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮಡಂತ್ಯಾರು ಇವರ ಪ್ರಾಯೋಜಕತ್ವ ಮತ್ತು ಶಾಸಕರ ಅನುದಾನದಲ್ಲಿ ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಉನ್ನತ ಮಟ್ಟದ ಸಭಾಭವನ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವನ್ನು ಮಾ. 8ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಲ್ಯಾನ್ಸಿ ಪಿಂಟೊ ಮತ್ತು ನಿರ್ದೇಶಕರು , ಮಡಂತ್ಯಾರು ಸಿ. ಎ ಬ್ಯಾಂಕ್ ಅಧ್ಯಕ್ಷ ಜೋಯಲ್ ಮೆಂಡೊನ್ಸಾ, ವಿವೇಕ್ ವಿಲ್ಸಂಟ್ ಪಾಯ್ಸ್, ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪ, ಮುಖ್ಯ ಕಾರ್ಯನಿರ್ವಾಧಿಕಾರಿ ವೆಲೇರಿಯನ್ ಡಿಸೋಜ ಉಪಸ್ಥಿತರಿದ್ದರು.
ಧರಣೇಂದ್ರ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿ, ಪುಂಜಾಲಕಟ್ಟೆ ಪ್ರಾಂಶುಪಾಲರಾದ ಸರೋಜಿನಿ ಸ್ವಾಗತಿಸಿ,
ಜಯಶ್ರೀ ಧನ್ಯವಾದವಿತ್ತರು.