ಬೆಳ್ತಂಗಡಿ: ಕರಂಬಾರು ಕೆಳ್ಕರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಇಂದು(ಮಾ.8) ಸಾರ್ವಜನಿಕ ಸತ್ಯನಾರಾಯಣ ಪೂಜೆ ಜರಗಿತು.
ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಗಣ ಹೋಮ, ಶ್ರೀ ನಾಗದೇವರಿಗೆ ಪಂಚಾಮೃತ ಅಭಿಷೇಕ, ಪರಿವಾರ ದೈವಗಳಿಗೆ ಪಂಚಾಮೃತ ಕಳಸಾಭಿಷೇಕ, ಪಂಚಪರ್ವ ಸೇವೆ, ಮಹಾಲಿಂಗೇಶ್ವರ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಜರಗಿತು.
ಈ ಸಂದರ್ಭದಲ್ಲಿ ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ನಡಕ್ಕರ, ಶಿರ್ಲಾಲು ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ನವೀನ್ ಕುಮಾರ್ ಸಾಮಾನಿ, ಬಳಂಜ ಗ್ರಾ.ಪಂ ಅಧ್ಯಕ್ಷೆ ಶೋಭಾ ಕುಲಾಲ್, ಪಿಡಿಓ ಗಣೇಶ್ ಶೆಟ್ಟಿ , ಸೇವಾ ಸಮಿತಿ ಅಧ್ಯಕ್ಷ ರಾಜಿತ್ ರೈ ಪಂಬಿದಬೆಟ್ಟು, ಮೊಕ್ತೇಸರರು ಕೆ. ರಾಮಚಂದ್ರ ರಾವ್ ಕಾಪಿನಡ್ಕ, ಪ್ರಧಾನ ಕಾರ್ಯದರ್ಶಿ ಅನಂತ ಪದ್ಮನಾಭ ಭಟ್ ಕಾಪಿನಡ್ಕ, ಸೇವಾ ಸಮಿತಿ ಗೌರವಾಧ್ಯಕ್ಷ ಶಿವಾನಂದ ಹೆಗ್ಡೆ, ಪ್ರಧಾನ ಅರ್ಚಕರು ನಾರಾಯಣ ಭಟ್, ಕೋಶಾಧಿಕಾರಿ ಸಂತೋಷ್ ಹೆಗ್ಡೆ ಪರ್ಲಂಡ, ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು, ವ್ಯವಸ್ಥಾಪನಾ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಸಾಯಂಕಾಲ ಭಜನಾ ಕಾರ್ಯಕ್ರಮ ಕಾರ್ತಿಕ ಪೂಜೆ ರಂಗಪೂಜೆ, ಬಲಿ ಉತ್ಸವ, ರಾಜಂಗನ ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ಜರಗಲಿದೆ, ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ತುಳು ಯಕ್ಷಗಾನ ತಾಳಮದ್ದಳೆ ಶನಿ ಮಹಾತ್ಮೆ ಜರಗಲಿದೆ,