ಕೊಕ್ಕಡ: ಉಪ್ಪಾರಪಳಿಕೆ, ಪುದ್ಯಂಗ, ಕೊಡಿಂಗೇರಿ, ಆರ್ಲ ಪ್ರದೇಶದ ಜನರ ಸುಮಾರು 40 ವರ್ಷಗಳ ಬೇಡಿಕೆಯ ರೂ.3.35 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ ಸಹಿತ ಕಿಂಡಿ ಅಣೆಕಟ್ಟುವಿನ ಉದ್ಘಾಟನೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರು ಮಾ.8 ರಂದು ನೆರವೇರಿಸಿದರು.
ಈ ವೇಳೆ ಶಾಸಕ ಹರೀಶ್ ಪೂಂಜರನ್ನು ಸ್ಥಳೀಯರು ಸನ್ಮಾನಿಸಿ ಗೌರವಿಸಿದರು.


ಈ ಸಂದರ್ಭದಲ್ಲಿ ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ , ಕೊಕ್ಕಡ ಗ್ರಾ.ಪಂ. ನಿಕಟಪೂರ್ವಧ್ಯಕ್ಷ ಯೋಗಿಶ್ ಆಲಂಬಿಲ, ತಾಲೂಕು ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ ಕೊಕ್ಕಡ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಬೇಬಿ, ಉಪಾಧ್ಯಕ್ಷ ಪ್ರಭಾಕರ ಗೌಡ, ಮಾಜಿ ಉಪಾಧ್ಯಕ್ಷೆ ಪವಿತ್ರ, ಸದಸ್ಯರಾದ ಪುರುಷೋತ್ತಮ, ಲತಾ, ಪ್ರಮೀಳಾ, ವಿಶ್ವನಾಥ, ಜಾನಕಿ, ಜಗದೀಶ್, ವನಜಾಕ್ಷಿ , ಕೊಕ್ಕಡ ಸಹಕಾರಿ ಸಂಘದ ಉಪಾಧ್ಯಕ್ಷ ಮಹಾಬಲ ಶೆಟ್ಟಿ, ಸಹಕಾರಿ ಸಂಘದ ನಿರ್ದೇಶಕರುಗಳಾದ ವಿಠ್ಠಲ ಭಂಡಾರಿ, ಶ್ರೀನಾಥ್ ಬಡಕೈಲು, ರವಿಚಂದ್ರ ಪುಡ್ಕೆತ್ತೂರು, ಕೊಕ್ಕಡ ಸೌತಡ್ಕ ದೇವಸ್ಥಾನದ ವವ್ಯಸ್ಥಾಪನ ಸಮಿತಿ ಮಾಜಿ ಸದಸ್ಯರಾದ ಪ್ರಶಾಂತ್ ಪೂವಾಜೆ, ವಿಠಲ ಕುರ್ಲೆ, ಅರಸಿನಮಕ್ಕಿ ಗ್ರಾ.ಪಂ. ನಿಕಟಪೂರ್ವಾಧ್ಯಕ್ಷ ನವೀನ್ ರೆಖ್ಯ, ಪಟ್ರಮೆ ಗ್ರಾ.ಪಂ. ಅಧ್ಯಕ್ಷ ಮನೋಜ್, ಉಮೇಶ್ ಅಲಂಗೂರು, ಗೋಳಿತೊಟ್ಟು ಗ್ರಾ. ಪಂ. ಅಧ್ಯಕ್ಷೆ ಸವಿತಾ, ಉಪಾಧ್ಯಕ್ಷ ಬಾಬು ಪೂಜಾರಿ, ನಿಕಟ ಪೂರ್ವ ಅಧ್ಯಕ್ಷ ಜನಾರ್ಧನ ಗೌಡ, ಲೋಕೇಶ್ ಜಾರಿಗೆತ್ತಡಿ ಕೊಕ್ಕಡ, ಬಾಲಚಂದ್ರ ಗೌಡ
ಪುಂಚೆತ್ತಿಮಾರು, ಅಣ್ಣು ಗೌಡ ಕೊಡಿಂಗೇರಿ, ಗಂಗಯ್ಯ ಗೌಡ ಕೊಡಿಂಗೇರಿ, ಗಣೇಶ್ ಅಶ್ವತ್ತಡಿ, ಯತೀಂದ್ರ ಗೌಡ ಕೊಕ್ಕಡ ಪ್ರೀತಂ ಆಯಿಲ್ ಮಿಲ್, ರಾಮಣ್ಣ ಗೌಡ ವಳಾಲು , ಉಪ್ಪಾರಪಳಿಕೆ ಶ್ರೀ ಕೃಷ್ಣ ಭಜನಾ ಮಂದಿರ ಸೇವಾ ಟ್ರಸ್ಟ್ಅಧ್ಯಕ್ಷ ಶ್ರೀನಾಥ್ , ಬಿಜೆಪಿ ಕಾರ್ಯಕರ್ತರು ಹಾಗೂ ಕೊಡಿಂಗೇರಿ ಪರಿಸರದವರು ಉಪಸ್ಥಿತರಿದ್ದರು.