ತಣ್ಣೀರುಪಂತ: ತಣ್ಣೀರುಪಂತ ಗ್ರಾಮದ ಪಾಲೇದು ಗ್ರಾಮಸ್ಥರ ಸುಭಿಕ್ಷೆಗಾಗಿ ಪ್ರಶ್ನಾ ಚಿಂತನೆ ದೈವಜ್ಞ ಬೆಳ್ಳಾರೆ ರಾಜೇಂದ್ರ ಪ್ರಸಾದ್ ಭಟ್ ನೇತೃತ್ವದಲ್ಲಿ ಮಾ.7ರಂದು ನಡೆಯಿತು.
ಸ್ಥಳದಲ್ಲಿ ಪಂಚ ಶಕ್ತಿಗಳಾದ ಮಹಾಮ್ಮಾಯಿ, ಭೈರವ , ಪಂಜುರ್ಲಿ, ಗುಳಿಗ ದೈವ ಹಾಗೂ ಮೂಲ ಮುಗೇರರು ಆರಾಧಿಸಿಕೊಂಡು ಬಂದಿರುವ ಮುರ್ಗೆಳು ದೈವ ಸಾನಿಧ್ಯವಿದೆ ಎಂದು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂತು. ಪೂರ್ವದಲ್ಲಿ ಜೈನ ಮನೆತನದವರು ಆರಾಧಿಸಿಕೊಂಡು ಬಂದಿದ್ದು ಕಾಲದಲ್ಲಿ ಆರಾಧನೆ ಶಮನವಾಗಿತ್ತು ಎಂದು ಪ್ರಶ್ರಾ ಚಿಂತನೆಯಲ್ಲಿ ತಿಳಿದು ಬಂದಿರುತ್ತದೆ.