ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಮಹಿಳಾ ಮೋರ್ಚಾದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ನಿವೃತ್ತ ಪ್ರಾಥಮಿಕ ಆರೋಗ್ಯ ಅಧಿಕಾರಿ ಶ್ರೀಮತಿ ಭಾರತಿ ವೆಂಕಟ್ರಮಣ ಗೌಡ ಸ್ಕಂದ ಶ್ರೀನಿವಾಸ ದೊಂಪದಪಲ್ಕೆ, ಇವರನ್ನು ಅಭಿನಂದಿಸಲಾಯಿತು.

ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ ಮಹಿಳಾ ದಿನಾಚರಣೆಯ ಬಗ್ಗೆ ಮಹಿಳೆಯರಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸನ್ಮಾನಿತೆ ತನ್ನ ಜೀವನದಲ್ಲಿ ಪ್ರಥಮವಾಗಿ ಗೌರ್ವಾಪಣೆ ಸ್ವೀಕರಿಸಿದ ಖುಷಿಯಲ್ಲಿ ಮಹಿಳಾ ಮೊರ್ಚಾಕ್ಕೆ ವಿಶೇಷವಾದ ಅಭಿನಂದನೆ ಸಲ್ಲಿಸಿದರು ಮತ್ತು ಅಂಗಾಂಗ ದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಜಯಂತ್, ಉಪಾಧ್ಯಕ್ಷೆ ಶಾರದಾ ಚಾರ್ಮಾಡಿ, ಕಾರ್ಯದರ್ಶಿ ಶಶಿಕಲಾ ದೇವಪ್ಪ ಗೌಡ, ಸದಸ್ಯರಾದ ಸವಿತಾ ಕುಲಾಲ್, ರೈತ ಮೋರ್ಚಾ ಸದಸ್ಯೆ ಶ್ರೀಮತಿ ಅಶ್ವಿನಿ ಹೆಬ್ಬಾರ್ ಮುಂಡಾಜೆ ಹಾಗೂ ಮಹಿಳಾ ಮೋರ್ಚಾ ಸದಸ್ಯರು ಭಾಗವಹಿಸಿದರು.