ಉಜಿರೆ: ಬಂಟರ ಯಾನೆ ನಾಡವರ ಸಂಘ ಉಜಿರೆ ವಲಯ ಸಮಿತಿಯ ಮಾಸಿಕ ಸಭೆಯಲ್ಲಿ ಮುಂಡಾಜೆಯ ಶ್ರೀಮತಿ ಗುಣವತಿ ಶೆಟ್ಟಿಯವರ ಗೃಹ ನಿರ್ಮಾಣಕ್ಕೆ ವಲಯದ ಬಂಟ ಬಾಂಧವರಿಂದ ಸಹಾಯ ಧನ ರೂಪದಲ್ಲಿ ಸಂಗ್ರಹಿಸಲಾದ ಮೊತ್ತವನ್ನು ಮಾ.9ರಂದು ನಡೆದ ಸಭೆಯಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿ ಉಜಿರೆ ವಲಯ ಅಧ್ಯಕ್ಷೆ ವನಿತಾ ವಿ. ಶೆಟ್ಟಿ, ಕಾರ್ಯದರ್ಶಿ ಸುದೇಶ್ ಶೆಟ್ಟಿ ಕುಂಠಿನಿ, ಉಪಾಧ್ಯಕ್ಷೆ ಸುಜಯ ಡಿ. ಶೆಟ್ಟಿ, ಕೋಶಾಧಿಕಾರಿ ಅಜಿತ್ ಕುಮಾರ್ ಕುಂಜರ್ಪ, ಗ್ರಾಮ ಸಮಿತಿ ಅಧ್ಯಕ್ಷ ಜಗನ್ನಾಥ ರೈ, ಮುಂಡಾಜೆ ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಅಗರಿ, ಕಾರ್ಯದರ್ಶಿ ಪ್ರದೀಪ್ ಶೆಟ್ಟಿ, ವೆಂಕಟರಮಣ ಶೆಟ್ಟಿ, ರಾಧಾಕೃಷ್ಣ ಶೆಟ್ಟಿ, ಶೋಭಾ ವಿ. ಶೆಟ್ಟಿ, ಪುಷ್ಪ ಆರ್ ಶೆಟ್ಟಿ ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.