ಕಳೆಂಜ : ಜನನಿ ಸಂಜೀವಿನಿ ಮಹಿಳಾ ಒಕ್ಕೂಟ ಕಳೆಂಜ ಇದರ ಮಹಾಸಭೆಯನ್ನು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆಸಲಾಯಿತು.

ಒಕ್ಕೂಟದ ಅಧ್ಯಕ್ಷೆ ಸಾವಿತ್ರಿ ರೈ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀಮತಿ ದೀಕ್ಷಾ ಮತ್ತು ಹರಿಣಾಕ್ಷಿ ಇವರ ಪ್ರಾರ್ಥನೆಯೊಂದಿಗೆ ಸಭೆಯನ್ನು ಪ್ರಾರಂಭಿಸಲಾಯಿತು. ಒಕ್ಕೂಟದ ಕಾರ್ಯದರ್ಶಿಯಾದ ಜಯಶ್ರೀ 2023-2024ರ ವರದಿಯನ್ನು ಹಾಗೂ ಜಮಾ ಖರ್ಚಿನ ವರದಿಯನ್ನು ಎಮ್ ಬಿ ಕೆ ವಿಮಲ ಮಂಡಿಸಿ ಅನುಮೋದನೆಯನ್ನು ಪಡೆಯಲಾಯಿತು. ವಲಯ ಮೇಲ್ವಿಚಾರಕರಾದ ವೀಣಾಶ್ರೀ ಮಹಾಸಭೆಯ ಉದ್ದೇಶ ಮತ್ತು ಜವಾಬ್ದಾರಿ ಮತ್ತು ಸಂಜೀವಿನಿ ಯೋಜನೆಯ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ನಂತರ ತುಳಸಿ ಸಂಜೀವಿನಿ ಸಂಘದ ಸದಸ್ಯ ಉತ್ಪಾದಿಸಿರುವ” ಉಪ್ಪಿನಕಾಯಿ” , ಉಮಾ ಸ್ತ್ರೀ ಶಕ್ತಿ ಸಂಘದ ಸದಸ್ಯರು ತಯಾರಿಸಿರುವ “ಪಿನಾಯಿಲ್” ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.
ನಂತರ ಉತ್ತಮ ಸಂಘವೆಂದು ಶ್ರೀ ದುರ್ಗಾ ಸಂಜೀವಿನಿ ಹಾಗೂ ಉಮಾ ಸ್ತ್ರೀ ಶಕ್ತಿ ಸಂಘವನ್ನು ಗುರುತಿಸಿ ಆ ಸಂಘದ ಸದಸ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪದಾಧಿಕಾರಿಗಳ ಆಯ್ಕೆ ಮಾಡಿ ಪದಗ್ರಹಣವನ್ನು ಮಾಡಲಾಯಿತು. ನಂತರದಲ್ಲಿ ನಿರ್ಗಮಿತ ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿ ಒಕ್ಕೂಟದ ಜವಾಬ್ದಾರಿಯನ್ನು ಹಸ್ತಾಂತರಿಸಲಾಯಿತು. ಮಹಾಸಭೆ ಹಾಗೂ ಮಹಿಳಾ ದಿನಾಚರಣೆಯ ಪ್ರಯುಕ್ತ ಏರ್ಪಡಿಸಲಾದ ವಿವಿಧ ಆಟೋಟ ಸ್ವರ್ಧೆಗಳ ಬಹುಮಾನ ವಿತರಣೆ ಯನ್ನು ಏರ್ಪಡಿಸಲಾಯಿತು. ಎಲ್.ಸಿ.ಆರ್.ಪಿ ಗೀತಾ ನಿರೂಪಣೆ ಮಾಡಿ ಪಶುಸಖಿ ಯಶೋದಾ ಧನ್ಯವಾದವಿತ್ತರು.