September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಉಜಿರೆ: ಶ್ರೀ ಧ.ಮಂ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ‘ವಾಣಿಜ್ಯ ವ್ಯವಹಾರಗಳ ಅಧ್ಯಯನದಲ್ಲಿ ಯಾಂತ್ರಿಕ ಬುದ್ಧಿಮತ್ತೆಯ ಪಾತ್ರ’ ವಿಶೇಷ ಉಪನ್ಯಾಸ ಕಾರ್ಯಕ್ರಮ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಯಲ್ಲಿ ಎಸ್ ಡಿ ಎಂ ರೋಟರಿ ವೃತ್ತಿ ಮಾರ್ಗ ದರ್ಶನ ಮತ್ತು ಮಾನವ ಸಂಪನ್ಮೂಲ ಕೇಂದ್ರವು ಆಯೋಜಿಸಿದ Digital literacy ಕಾರ್ಯಕ್ರಮದ ಅಡಿಯಲ್ಲಿ ವಾಣಿಜ್ಯ ವ್ಯವಹಾರಗಳ ಅಧ್ಯಯನದಲ್ಲಿ ಯಾಂತ್ರಿಕ ಬುದ್ಧಿಮತ್ತೆ ಯ ಪಾತ್ರ ದ ಕುರಿತು ವಾರಾಣಸಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದು ಪಸ್ತುತ ಆಲೈನ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ವಿವೇಕ್ ಮಿಶ್ರಾ ಮತ್ತು ಆಲೈನ್ಸ್ ವಿಶ್ವವಿದ್ಯಾಲಯದಲ್ಲಿ ತರಬೇತಿ ಮತ್ತು ವೃತ್ತಿ ಮಾರ್ಗದರ್ಶನ ವಿಭಾಗದ ನಿರ್ದೇಶಕ ಡಾ. ಬಾಲಾಜಿ ವೃತ್ತಿ ರವರು ವಿಷೇಶ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಕೃತಕ ಬುದ್ಧಿಮತ್ತೆ ಭವಿಷ್ಯದಲ್ಲಿ ವ್ಯಾಪಕ ಉದ್ಯೋಗಾವಕಾಶ ಸೃಷ್ಟಿಸಲಿದ್ದು ವಾಣಿಜ್ಯ ವ್ಯವಹಾರದಲ್ಲಿ ಅನಿವಾರ್ಯ ಆಗಲಿದೆ ಆದ್ದರಿಂದ ವಿದ್ಯಾರ್ಥಿಗಳು ಯಾಂತ್ರಿಕ ಬುದ್ಧಿಮತ್ತೆ ಕುರಿತು ಉನ್ನತ ವ್ಯಾಸಂಗ ಮಾಡಿದರೆ ಉದ್ಯೋಗ ಅವಕಾಶಗಳು ತುಂಬಾ ಇದೆ ಎನ್ನುವ ಕುರಿತು ಅರಿವು ಮೂಡಿಸಿದರು.

ಈ ಸರಣಿ ಉಪನ್ಯಾಸ ಕಾರ್ಯಕಾರ್ಯಕ್ರಮದಲ್ಲಿ ಬಿ.ಕಾಮ್ ಬಿಸಿಎ ಮತ್ತು ಬಿಬಿಎ ವಿದ್ಯಾರ್ಥಿಗಳಿಗೆ ಭಾಗವಹಿಸಿದ್ದರು ಒಟ್ಟು 254 ವಿದ್ಯಾರ್ಥಿಗಳು ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಂಡರು.


ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಎ ಕುಮಾರ ಹೆಗ್ಡೆ ಯವರ ಮಾರ್ಗದರ್ಶನದಲ್ಲಿ ತರಬೇತಿ ಮತ್ತು ವೃತ್ತಿ ಮಾರ್ಗದರ್ಶನ ವಿಭಾಗದ ಸಂಯೋಜಕರಾದ ಡಾ. ನಾಗರಾಜ ಪೂಜಾರಿ ಮತ್ತು ಸೌಮ್ಯ ಕುಮಾರಿ ಯವರು ಯಶಸ್ವಿಯಾಗಿ ತರಬೇತಿ ಕಾರ್ಯಾಗಾರನ್ನು ಸಂಘಟಿಸಿ ನಿರ್ವಹಣೆ ಮಾಡಿದರು.

Related posts

ಪ್ರಿಕೆಜಿ ವಿದ್ಯಾರ್ಥಿ ಸಮಕ್ಷ್ ನ ಹುಟ್ಟು ಹಬ್ಬದ ಆಚರಣೆಯ ಪ್ರಯುಕ್ತ ಕುಂಭಶ್ರೀ ಆಂ.ಮಾ. ಶಾಲಾ ಕಾಲೇಜಿಗೆ ಗಡಿಯಾರ ಕೊಡುಗೆ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನ ಸಭೆ

Suddi Udaya

ಸೆ.16: ಲಾಯಿಲ ವಿಶ್ವಕರ್ಮ ಸಭಾಭವನದಲ್ಲಿ ಶ್ರೀ ವಿಶ್ವಕರ್ಮ ಯಜ್ಞ ಮತ್ತು ಪೂಜೆ

Suddi Udaya

ಮೈರೋಳ್ತಡ್ಕ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಮರದ ಕೊಂಬೆ ತೆರವು ಹಾಗೂ ಗಿಡ ಗಂಟಿಗಳ ತೆರವು ಕಾರ್ಯ

Suddi Udaya

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಎಕ್ಸೆಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ಸನ್ಮಾನ: ನೀಟ್ ಸಾಧನೆಯ ಮೂಲಕ ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚಿನ ವಿದ್ಯಾರ್ಥಿಗಳನ್ನು ಕಳುಹಿಸಿದ ಎಕ್ಸೆಲ್ ಶಿಕ್ಷಣ ಸಂಸ್ಥೆ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ರಂಗಕಲೆಗಳ ಸ್ವರೂಪ ಕಾರ್ಯಕ್ರಮ

Suddi Udaya
error: Content is protected !!