ಬೆಳ್ತಂಗಡಿ: ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ (ಅಂಬೇಡ್ಕರ್ ವಾದ ) “ದಲಿತ ಚಳುವಳಿಯ ವರ್ತಮಾನದ ಸವಾಲುಗಳು ಮತ್ತು ಮರ್ಗೋಪಾಯಗಳು”ಎನ್ನುವ ವಿಷಯ ಕುರಿತು ವಿಚಾರ ಸಂಕಿರಣ ಮತ್ತು ಮೈಸೂರು ವಿಭಾಗೀಯ ಪದಾಧಿಕಾರಿಗಳ ಸರ್ವಸದಸ್ಯರ ಸಭೆಯು ಇತ್ತೀಚೆಗೆ ಮೈಸೂರಿನ ಜೆ ಎಲ್ ಬಿ ರಸ್ತೆಯಲ್ಲಿರುವ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ದಸಂಸ ಅಂಬೇಡ್ಕರ್ ವಾದ ಇದರ ರಾಜ್ಯ ಪ್ರದಾನ ಸಂಚಾಲಕ ಮಾವಳ್ಳಿ ಶಂಕರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಕೆ. ದೀಪಕ್ ರವರು ಉದ್ಘಾಟಿಸಿದರು.
ದಲಿತ ಚಳುವಳಿಯ ವರ್ತಮಾನದ ಸವಾಲುಗಳು ಮತ್ತು ಮಾರ್ಗೋಪಾಯಗಳು ವಿಚಾರವಾಗಿ ವಿಷಯ ಮಂಡನೆಯ ಕುರಿತು ದಲಿತ ಸಾಹಿತ್ಯ ಪರಿಷತ್ ನ ಸಂಯೋಜಕರಾದ ಡಾ. ಚಂದ್ರಗುಪ್ತ ರವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ದಲಿತ ನಾಯಕ ,ವಿಮರ್ಶಕರು, ರಾಜ್ಯ ಮಟ್ಟದ ರಂಗ ಕಲಾವಿದರಾದ ಜನಾರ್ಧನ್ ಜನ್ನಿ, ರಾಜ್ಯ ಸಂಘಟನಾ ಸಂಚಾಲಕರುಗಳಾದ ಈರೇಶ್ ಹೀರೆಹಳ್ಳಿ, ಸುಂದರ್ ಮಾಸ್ತರ್ ಉಡುಪಿ, ಮಲ್ಲೇಶ್ ಅಂಬುಗ ಹಾಸನ್, ಸಿದ್ದರಾಜ್ ದೊಡ್ಡಿಂದವಾಡಿ ಚಾಮರಾಜ ನಗರ, ಹಾಗೂ ವಿಭಾಗೀಯ ಸಂಘಟನಾ ಸಂಚಾಲಕರಾದ ಬಿ.ಕೆ.ವಸಂತ್ ಬೆಳ್ತಂಗಡಿ, ಮೈಸೂರು ಜಿಲ್ಲಾ ಪ್ರಧಾನ ಸಂಚಾಲಕರಾದ ಮಲ್ಲಹಳ್ಳಿ ನಾರಾಯಣ್, ಮೈಸೂರು ಜಿಲ್ಲಾ ಮಹಿಳಾ ಒಕ್ಕೂಟದ ಸಂಚಾಲಕಿ ಧರ್ಮಮ್ಮ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು..
ದ.ಸಂ.ಸ.ಅಂಬೇಡ್ಕರ್ ವಾದ ಮೈಸೂರು ವಿಭಾಗೀಯ ಮಟ್ಟದ ಸರ್ವ ಸದಸ್ಯ ಸಭೆಯಲ್ಲಿ ಮೈಸೂರು ವಿಭಾಗೀಯ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆಯು ನಡೆಯಿತು.
ಮೈಸೂರು ವಿಭಾಗೀಯ ಸಂಚಾಲಕರಾಗಿ ಹಾಲೇಶಪ್ಪ ಶಿವಮೊಗ್ಗ ಇವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾಗಿ ಎರಡನೇ ಬಾರಿಗೆ ಬಿ.ಕೆ.ವಸಂತ್ ಬೆಳ್ತಂಗಡಿ ಇವರು ಸರ್ವಾನುಮತದಿಂದ
ಆಯ್ಕೆಯಾಗಿದ್ದಾರೆ.